ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ: ಪ್ರದೀಪ್

90

Get real time updates directly on you device, subscribe now.


ತುಮಕೂರು: ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿದ್ಯಾವಾಹಿನಿ ಪ್ಯಾರಾ ಮೆಡಿಕಲ್ ಕಾಲೇಜು, ತುಮಕೂರಿನ 41 ಇಆರ್ಎಸ್ ಕ್ಲಬ್ 173, ಹೆಚ್ ಡಿ ಎಫ್ ಸಿ ಬ್ಯಾಂಕ್, ಸಂಜೀವಿನಿ ಬ್ಲಡ್ ಬ್ಯಾಂಕ್ ಮತ್ತು ಎನ್ಎಸ್ಎಸ್ ಘಟಕ (ವಿವಿಎಫ್ ಜಿಸಿ) ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮತ್ತು 41 ಇಆರ್ಎಸ್ ಕ್ಲಬ್ 173 ನ ಛೇರ್ಮನ್ ಆದ ಎನ್.ಬಿ. ಪ್ರದೀಪ್ ಕುಮಾರ್ ಮಾತನಾಡಿ, ನೀವು ಒಬ್ಬರು ರಕ್ತದಾನ ಮಾಡಿದರೆ ಮೂರು ಜೀವದಾನ ಮಾಡಿದಂತೆ, ಇಂದಿನ ಯುವ ಜನತೆಯಲ್ಲಿ ಈ ಸಮಾಜಿಕ ಕಳಕಳಿಯ ಮನೋಭಾವನೆ ಬೆಳೆಸಿಕೊಳ್ಳುವುದು ಬಹಳ ಮುಖ್ಯ, ರಕ್ತದಾನ ಮಹಾದಾನ ಎಂದು ತಿಳಿಸಿದರು.
ಶಿಬಿರದಲ್ಲಿ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ, ಕಾರ್ಯಕ್ರಮದಲ್ಲಿ ತುಮಕೂರು 41 ಇಆರ್ಎಸ್ ಕ್ಲಬ್ 173ನ ಕಾರ್ಯದರ್ಶಿ ಭಾರತೀಶ್, ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಕ್ಲಷ್ಟರ್ ಹೆಡ್ ವಿಶ್ವನಾಥ್, ಬ್ರಾಂಚ್ ಮ್ಯಾನೇಜರ್ ವಸಂತ ಹಾಗೂ ಬ್ರಾಂಚ್ ಆಪರೇಷನ್ ಮ್ಯಾನೇಜರ್ ವಿಜಯ್ ಕುಮಾರ್ ಮತ್ತು ತುಮಕೂರಿನ ಸಂಜೀವಿನಿ ರಕ್ತನಿಧಿಯ ವ್ಯವಸ್ಥಾಪಕ ಅರುಣ್ ಕುಮಾರ್ ಹಾಗೂ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ.ಎ.ಪ್ರೇಮ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!