ಮಾನವ ಕುಲ ಕಾಪಾಡಲು ವೈದ್ಯರು ಬದ್ಧರಾಗಲಿ

ರೋಗಗಳ ನಿವಾರಣೆಗ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಅಗತ್ಯ: ಡಾ.ರಮೇಶ್ ಬಾಬು

61

Get real time updates directly on you device, subscribe now.


ತುಮಕೂರು: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಮತ್ತು ಅನುವಂಶೀಯ ನ್ಯೂನತೆಗಳ ಕಾರಣದಿಂದ ಕಾಣಿಸಿಕೊಳ್ಳುವ ರೋಗದಿಂದ ಮಾರಾಣಾಂತಿಕ ಶಸ್ತ್ರ ಚಿಕಿತ್ಸಾ ರೋಗಗಳ ನಿವಾರಣೆ ಮತ್ತು ನಿಯಂತ್ರಣಕ್ಕೆ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಬಳಕೆ ಅನುಸರಿಸಿಕೊಳ್ಳಲು ವೈದ್ಯ ಸಮುದಾಯ ಗಮನ ಹರಿಸುವ ಅಗತ್ಯವಿದೆ ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಭಾರತೀಯ ಮಕ್ಕಳ ಶಸ್ತ್ರ ಚಿಕಿತ್ಸಕರ ಸಂಘದ ಅಧ್ಯಕ್ಷ ಹಾಗೂ ಚೆನ್ನೈ ಪೋರೂರ್ ನಲ್ಲಿರುವ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಸಂಸ್ಥೆ ಸಂಶೋಧನಾ ಕೇಂದ್ರದ ಪೀಡಿಯಾಟ್ರಿಕ್ ವಿಭಾಗದ ಪ್ರಾಧ್ಯಾಪಕ ಮತ್ತು ಹಿರಿಯ ಸಲಹೆಗಾರ ಡಾ.ರಮೇಶ್ ಬಾಬು ತಿಳಿಸಿದರು.
ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ಗಳ ಕರ್ನಾಟಕ ಘಟಕದ 18ನೇ ವರ್ಷದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿರುವ ಮಕ್ಕಳ ರೊಗಗಳ ಶಸ್ತ್ರಚಿಕಿತ್ಸಕರು ಮತ್ತು ತಜ್ಞರು ಪರಸ್ಪರರ ಅನುಭವ ಹಂಚಿಕೊಳ್ಳುವ ಮತ್ತು ಅವರ ಶಸ್ತ್ರಚಿಕಿತ್ಸಾ ಕೌಶಲ್ಯ ಹೆಚ್ಚಿಸುವ ಉದ್ದೇಶಕ್ಕಾಗಿ ಒಟ್ಟಾಗಿ ಸೇರಿ ತಮ್ಮಅನುಭವ ಮತ್ತು ಆಶಯಗಳನ್ನು ಸಾಕಾರಗೊಳಿಸಲು ಇಂತಹ ಸಮ್ಮೇಳನಗಳು ಸಹಕಾರಿಯಾಗುತ್ತವೆ ಎಂದರು.

ಭವಿಷ್ಯದ ಮಕ್ಕಳ ಆರೋಗ್ಯದ ಕಾಳಜಿ ಹಿನ್ನೆಲೆಯಲ್ಲಿ ಮಕ್ಕಳ ಶಸ್ತ್ರ ಚಿಕಿತ್ಸಾ ಕ್ಷೇತ್ರದಲ್ಲಿನ ಇತ್ತೀಚಿನ ವೈದ್ಯಕೀಯ ತಂತ್ರಗಳನ್ನು ಗ್ರಾಮೀಣ ಭಾಗಗಳಿಗೆ ಕೊಂಡೊಯ್ಯಲು ವೈದ್ಯ ಸಮುದಾಯ ಪ್ರಾಮಾಣಿಕ ಮತ್ತು ಸಮರ್ಪಿತ ಸೇವೆಯ ಮೂಲಕ ಮಾನವ ಕುಲವನ್ನು ನೋವು ಮತ್ತು ಸಂಕಟದಿಂದ ಮುಕ್ತಗೊಳಿಸುವ ಉದಾತ್ತ ಗುಣ ಮೈಗೂಢಿಸಿಕೊಳ್ಳಬೇಕು ಎಂದು ವೈದ್ಯರಲ್ಲಿ ಮನವಿ ಮಾಡಿದರು.
ಸಮ್ಮೇಳನ ಮುಖ್ಯಅತಿಥಿಯಾಗಿದ್ದ ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ ಕಾರ್ಯದರ್ಶಿ ಹಾಗೂ ಮಧ್ಯ ಪ್ರದೇಶದ ಜಬಲ್ಪುರದಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗ ಪ್ರಾಧ್ಯಾಪಕ ಡಾ.ವಿಕೇಶ್ ಅಗರವಾಲ್ ಮಾತನಾಡಿ, ನವಜಾತ ಶಿಶು ಮತ್ತು 5 ವರ್ಷದೊಳಗಿನ ಶಿಶುಗಳ ಮರಣ ದರ ಕಡಿತಗೊಳಿಸಲು ಮತ್ತು ಮಕ್ಕಳ ಆರೋಗ್ಯ ಸುಧಾರಿಸಲು ಆಧುನಿಕ ವೈಜ್ಞಾನಿಕ ವಿಧಾನ ಅನುಸರಿಸಲು ವೈದ್ಯರು ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.
ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ನರೇಂದ್ರ ಬಾಬು ಮಾತನಾಡಿ, ಪ್ರತಿ ಮಗುವಿನ ಬಗ್ಗೆ ಸೂಕ್ತ ಕಾಳಜಿ ವಹಿಸಿ, ಅವುಗಳ ಬೆಳವಣಿಗೆಯನ್ನು ಸಮಪರ್ಕವಾಗಿ ಗಮನಿಸಬೇಕು ಮತ್ತು ಯಾವುದೇ ಏರುಪೇರು ಬಂದ ತಕ್ಷಣ ಗುರುತಿಸಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಪೋಷಕರು ಮುಂದಾಗಬೇಕು, ಯಾವುದೇ ಕಾಯಿಲೆಯನ್ನು ವಿಳಂಬವಿಲ್ಲದೇ ವೈದರ ಗಮನಕ್ಕೆ ತಂದು ಪತ್ತೆ ಹಚ್ಚಿ, ಶಸ್ತ್ರಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ ಕರ್ನಾಟಕ ಶಾಖೆಯ ಕಾರ್ಯದರ್ಶಿ, ಸಂಘಟನಾ ಅಧ್ಯಕ್ಷ ಹಾಗೂ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸುಬ್ರಮಣ್ಯ ಕಟ್ಟೆಪುರ ಮಾತನಾಡಿ, ತಮ್ಮ ವಿಭಾಗದಲ್ಲಿ ಸಂಕೀರ್ಣವಾದ ಮಕ್ಕಳ ರೋಗಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ, ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸೇವೆ ಅಳವಡಿಸಿಕೊಳ್ಳುತ್ತಿರುವ ಬಗ್ಗೆ ವಿವರಿಸಿ, ಮಕ್ಕಳ ವಿಶೇಷ ಕಾಯಿಲೆಗಳ ಕುರಿತು ಅಧ್ಯಯನ ನಡೆಸಿ ಚಿಕಿತ್ಸೆ ಮಾಡುವುದಕ್ಕೆ ವಿಶೇಷ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.
ಸಮ್ಮೇಳನದಲ್ಲಿ ಸಾಹೇ ವಿವಿ ಉಪ ಕುಲಪತಿ ಡಾ.ಲಿಂಗೇಗೌಡ.ಕೆ.ಬಿ, ಕುಲಸಚಿವ ಡಾ.ಎಂ.ಝೆಡ್.ಕುರಿಯನ್, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್ ಮತ್ತು ಹಿರಿಯ ವೈದ್ಯರಾದ ಯತ್ರೀಂದ್ರಾ ನಂಜಯ್ಯ ಹಾಜರಿದ್ದರು.

ಮೂರು ದಿನಗಳ ಈ ರಾಷ್ಟ್ರೀಯ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ತಜ್ಞ ವೈದ್ಯರು ಮಕ್ಕಳ ರೊಗಗಳು ಮತ್ತು ಚಿಕಿತ್ಸಾ ವಿಧಾನಗಳಲ್ಲಿನ ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳ ಕುರಿತು ತಮ್ಮ ಪ್ರಬಂಧ ಮಂಡಿಸಿ, ಸಂವಾದ ನಡೆಸಿದರು.

Get real time updates directly on you device, subscribe now.

Comments are closed.

error: Content is protected !!