ಪೊಲೀಸ್ ಪೇದೆ ನಾಪತ್ತೆ

230

Get real time updates directly on you device, subscribe now.


ಮಧುಗಿರಿ: ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರೇಶ್ ಎಂಬುವವರು ಕಾಣೆಯಾಗಿದ್ದಾರೆ.
ಮಧುಗಿರಿ- ಪಾವಗಡ ಕೆ ಶಿಪ್ ರಾಜ್ಯ ಹೆದ್ದಾರಿ ಮಿಡಿಗೇಶಿ ಹೋಬಳಿ ಬಿದರೆ ಕೆರೆ ಬಳಿ ಪೊಲೀಸ್ ಪೇದೆ ವೀರೇಶ್ ( 24) ದ್ವಿಚಕ್ರ ವಾಹನ ಹಾಗೂ ಬಟ್ಟೆ, ಮೊಬೈಲ್ ಕೆರೆಯ ಸಮೀಪ ಪತ್ತೆಯಾಗಿದೆ.
ಕೊಪ್ಪಳ ಜಿಲ್ಲೆಯ ನಿವಾಸಿಯಾಗಿರುವ ವೀರೇಶ್ ಗೆ ಇದೇ ತಿಂಗಳು 21 ರಂದು ಮದುವೆ ನಿಶ್ಟಿತವಾಗಿತ್ತು, ಈ ಹಿನ್ನೆಲೆಯಲ್ಲಿ ರಜೆ ನೀಡುವಂತೆ ತಮ್ಮ ಮೇಲಾಧಿಕಾರಿಗಳ ಬಳಿ ಅನುಮತಿ ಕೋರಿದ್ದರು ಎನ್ನಲಾಗಿದೆ.
ಪ್ರತಿ ನಿತ್ಯ ವಾಯು ವಿಹಾರ ಮಾಡುತಿದ್ದ ಕೆರೆ ಏರಿ ಬಳಿ ಬಟ್ಟೆ, ದ್ವಿಚಕ್ರ ವಾಹನ ಪತ್ತೆಯಾದ ಹಿನ್ನೆಲೆಯಲ್ಲಿ ಕೆರೆ ಏರಿ ಬಳಿ ರಾತ್ರಿ 11 ಗಂಟೆ ವರೆಗೆ ಪೊಲೀಸರು ಹುಡುಕಾಟ ಮಾಡಿದ್ದಾರೆ, ಮತ್ತೆ ಹುಡುಕಾಟ ಆರಂಭಿಸಿರುವ ಸ್ಥಳೀಯ ಪೊಲೀಸರಿಗೆ ಆಗ್ನಿಶಾಮಕ ದಳದ ಸಿಬ್ಬಂದಿ ಸಹಕರಿಸುತ್ತಿ ದ್ದಾರೆ.
ಈ ಬಗ್ಗೆ ಸಿಪಿಐ ಹನುಮಂತರಾಯಪ್ಪ ಪ್ರತಿಕ್ರಿಯೆ ನೀಡಿದ್ದು ವೀರೇಶ್ ಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿಲ್ಲ, ಕರ್ತವ್ಯಕ್ಕೂ ಹಾಜರಾಗಿಲ್ಲ, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!