ಶಿಕ್ಷಕಿ ಪುಷ್ಪ ನಿಧನ

93

Get real time updates directly on you device, subscribe now.

ಕುಣಿಗಲ್: ಪಟ್ಟಣದ ಸರ್ವೋದಯ ಪ್ರೌಢಶಾಲೆಯ ಮಾಜಿ ಪ್ರಾಚಾರ್ಯ ಶಿವಪ್ಪನವರ ಪತ್ನಿ, ಶಿಕ್ಷಕಿ ಪುಷ್ಪ (43) ನಿಧನರಾದರು.
ಪುಷ್ಪ ಪಟ್ಟಣದ 18ನೆ ವಾರ್ಡ್ನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಾಗಿದ್ದರು. ಇವರಿಗೆ ಕಳೆದ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪುಷ್ಪ ಸರ್ವೋದಯ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಶಾಲೆಯಲ್ಲಿ ಕೆಲಸ ಬಿಟ್ಟ ನಂತರ ಮನೆಯಲ್ಲೆ ನೂರಾರು ಮಕ್ಕಳಿಗೆ ಉಚಿತವಾಗಿ ಬೋಧನೆ ಮಾಡುತ್ತಾ ಪುಷ್ಪ ಮಿಸ್ ಎಂದೆ ಜನಾನುರಾಗಿಯಾಗಿದ್ದರು. ಪತಿ ಶಿವಪ್ಪ, 12 ವರ್ಷದ ಪುತ್ರ, 14 ವರ್ಷದ ಪುತ್ರಿ ಸೇರಿದಂತೆ ಅಪಾರ ಬಂಧು, ಶಿಷ್ಯ ವರ್ಗವನ್ನು ಅಗಲಿದ್ದಾರೆ. ಪಟ್ಟಣದ ಸರ್ವೋದಯ ಶಾಲೆಯ ಆಡಳಿತ ಮಂಡಳಿ, ಅಧ್ಯಕ್ಷ ನಾಗರಾಜ್ ಸೇರಿದಂತೆ ಅವರ ಶಿಷ್ಯ ವರ್ಗ ತೀವ್ರ ಸಂತಾಪ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!