ರಾಮಮಂದಿರ ನಿರ್ಮಾಣ ಶತಮಾನಗಳ ಕನಸು

92

Get real time updates directly on you device, subscribe now.


ತುಮಕೂರು: ಶ್ರೀ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾವಾಗುತ್ತಾ ಶತ ಶತಮಾನಗಳ ಕನಸು ನನಸಾಗುತ್ತಿದೆ, ಈ ಸಂದರ್ಭವನ್ನು ದೇಶದ ಜನ ಭಕ್ತಿ, ಸಂಭ್ರಮದಿಂದ ಸ್ಮರಣೀಯವಾಗಿಸಿಕೊಳ್ಳಬೇಕು ಎಂದು ಶ್ರೀರಾಮ ಜನ್ಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯೂ ಆದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥಪಾದಂಗಳು ಹೇಳಿದರು.

ನಗರದ ಶ್ರೀರಾಮ ಮಂದಿರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಜಿಲ್ಲೆಗೆ ಆಗಮಿಸಿದ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ತಾಲ್ಲೂಕು ಮುಖಂಡರಿಗೆ ವಿತರಿಸಿ ಸ್ವಾಮೀಜಿ ಮಾತನಾಡಿ, ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಶ್ರೀರಾಮ ಮೂರ್ತಿಯ ಶಿಲಾಬಿಂಬ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ, ಅಂತಹವರು ತಮ್ಮ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ, ಹೋಮ, ಹವನ, ಪ್ರಸಾದ ವಿತರಣೆ ಮಾಡಿ ಪವಿತ್ರ ಸಂದರ್ಭವನ್ನು ಸ್ಮರಣೀಯವಾಗಿಸಿಕೊಳ್ಳಿ ಎಂದು ಹೇಳಿದರು.

ವಿಭಾಗ ಸಂಘ ಸಂಚಾಲಕ್ ನಾಗೇಂದ್ರ ಪ್ರಸಾದ್, ಟ್ರಸ್ಟ್ನ ವಿಭಾಗೀಯ ಸಂಯೋಜಕ್ ಜಿ.ಕೆ.ಶ್ರೀನಿವಾಸ್, ಜಿಲ್ಲಾ ಸಂಯೋಜಕ್ ಸಂದೀಪ್ ಗೌಡ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಜಿ.ಎಸ್.ಬಸವರಾಜು, ಭಜರಂಗದಳ ವಿಭಾಗ ಸಂಯೋಜಕ ಮಂಜು ಭಾರ್ಗವ್ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!