ಪ್ರತಿ ಜೀವಿಗಳಿಗೂ ಗೌರವದ ಬದುಕು ಅಗತ್ಯ

ಮನುಷ್ಯ ಅಹಂ ಬಿಟ್ಟು ಪರಸ್ವರ ಗೌರವದಿಂದ ಬದುಕಲಿ

79

Get real time updates directly on you device, subscribe now.


ತುಮಕೂರು: ಭೂಮಿಯಲ್ಲಿ ಮೇಲಿರುವ ಪ್ರತಿ ಜೀವಿಗೂ ಗೌರವಯುತ ಬದುಕುವ ಕಲ್ಪಸಿ ಕೊಡುವುದೇ ಮಾನವ ಹಕ್ಕುಗಳ ದಿನಾಚರಣೆಯ ಹಿಂದಿನ ಉದ್ದೇಶ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ತಿಳಿಸಿದ್ದಾರೆ.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ಹಾಗೂ ವಿದ್ಯೋದ್ಯಯ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ನಾನು, ನನ್ನದು ಶ್ರೇಷ್ಠ ಎಂಬ ಕಲ್ಪನೆಯೇ ಮಾನವ ಹಕ್ಕುಗಳ ಉಲ್ಲಂಘನೆಗೆ ಮೂಲ, ಇಂತಹ ಅಹಂ ಬಿಟ್ಟು ಪರಸ್ವರ ಗೌರವದಿಂದ ನಡೆದು ಕೊಳ್ಳುವುದೇ ಪರಿಹಾರ ಎಂದರು.

ಯಾವ ವ್ಯಕ್ತಿ ಅಧಿಕಾರದ ಅಹಂನಿಂದ ಬೀಗದೆ, ತನ್ನಂತೆಯೇ ಇತರರು ಎಂದು ಪರಿಗಣಿಸುತ್ತಾನೋ ಅಂದು ಇಂತಹ ಆಚರಣೆಗಳ ಅಗತ್ಯ ಇರುವುದಿಲ್ಲ, ಬದಲಾಗಿ ಅಧಿಕಾರ, ಅಂತಸ್ತುಗಳ ಅಹಂಗೆ ಅಂಟಿ ಕೂತರೆ ಇಂತಹ ಸಮಸ್ಯೆ ಉದ್ಭವ ವಾಗುತ್ತವೆ, ಪ್ರಪಂಚದಲ್ಲಿ 198 ರಾಷ್ಟ್ರಗಳು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿವೆ, ನ್ಯಾಯಾಲಯಕ್ಕೆ ಬರುವ ವ್ಯಾಜ್ಯಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ಕೇಂದ್ರಗಳ ವೇದಿಕೆಯಾಗಿವೆ, ಇದು ಇಬ್ಬರ ನಡುವೆ ವ್ಯಾಜ್ಯಕ್ಕೆ ಕಾರಣವಾದ ಘಟನೆಯ ಕುರಿತು ಮನವರಿಕೆ ಮಾಡಿಕೊಟ್ಟರೆ ಮನಪರಿವರ್ತನೆ ಸಾಧ್ಯ.ಜನತೆ ಇದನ್ನು ಬಳಸಿಕೊಳ್ಳ ಬೇಕು ಎಂದು ನ್ಯಾ.ಬಿ.ಜಯಂತ್ ಕುಮಾರ್ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ನಮ್ಮ ಸಂವಿಧಾನ ದೇಶದ ಜನರಿಗೆ ಹಲವಾರು ಮೂಲಭೂತ ಹಕ್ಕುಗಳನ್ನು ನೀಡಿದೆ, ಇದು ಕಾನೂನು ಚೌಕಟ್ಟಿನಲ್ಲಿ ಬದುಕಲು ಅವಕಾಶವಿದೆ, 2008ರಲ್ಲಿ ಯೂನಿಸೆಫ್ ಬಿಡುಗಡೆ ಮಾಡಿದ ಒಂದು ವರದಿಯ ಪ್ರಕಾರ ಪೊಲೀಸ್ ಠಾಣೆಗಳಲ್ಲಿ ದಿನಕ್ಕೆ ನಾಲ್ಕು ಜನ ಸಾವನ್ನಪ್ಪುತ್ತಿರುವುದು ಬೆಳಕಿಗೆ ಬಂದಿತ್ತು, ಈ ಹಿನ್ನೆಲೆಯಲ್ಲಿ ಸರಕಾರ ತೆಗೆದುಕೊಂಡು ಹಲವು ನಿರ್ಧಾರಗಳ ಫಲವಾಗಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ, ಶಿಕ್ಷಣ, ಆರೋಗ್ಯ ಹಕ್ಕುಗಳನ್ನು ನೀಡುವ ಸಲುವಾಗಿಯೇ ಆರ್ ಟಿ ಇ, ಎನ್ ಹೆಚ್ ಆರ್ಎಂ ನಂತಹ ಯೋಜನೆ ಜಾರಿಗೆ ಬಂದಿದೆ ಎಂದರು.

ಜಿಲ್ಲೆಯ ಗೊಲ್ಲರ ಹಟ್ಟಿನಗಳಲ್ಲಿ ಮೌಢ್ಯದಿಂದ ಸಂಕಷ್ಟಕ್ಕೆ ಒಳಗಾಗುತ್ತಿರುವ ಹೆಣ್ಣು ಮಕ್ಕಳ ಶೋಷಣೆ ತಪ್ಪಿಸುವ ಉದ್ದೇಶದಿಂದಲೇ ಜಿಲ್ಲೆಯ 630 ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಅವರಿಗೆ ಕುಡಿಯುವ ನೀರು, ರಸ್ತೆ, ವಸತಿ ಕಲ್ಪಿಸಲು ಕ್ರಿಯಾ ಯೋಜನೆ ತಯಾರಿಸಿದೆ, ಈಗಾಗಲೇ 50 ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಸಲಾಗಿದೆ, ನ್ಯಾಯ ಎಲ್ಲರಿಗೂ ಎಂಬ ನಿಟ್ಟಿನಲ್ಲಿ ಇನ್ನೊಬ್ಬರ ಹಕ್ಕುಗಳನ್ನು ಗೌರವಿಸುವ ಮೂಲಕ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ವಿದ್ಯೋದಯ ಫೌಂಡೇಷನ್ ನ ಸಿಇಓ ಪ್ರೊ.ಕೆ.ಚಂದ್ರಣ್ಣ, ವಿದ್ಯೋದಯ ಫೌಂಡೇಷನ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಎಸ್.ರಾಜು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶಮಾ ಸೈಯದಿ, ಸಂಯೋಜಕ ಕುಮಾರ್ ಮತ್ತಿತತರು ಇದ್ದರು.

Get real time updates directly on you device, subscribe now.

Comments are closed.

error: Content is protected !!