ಎಲ್ಲವನ್ನೂ ಅಳೆದು ತೂಗಿ ನೋಡಿ: ಕುಲಪತಿ

74

Get real time updates directly on you device, subscribe now.


ತುಮಕೂರು: ಸಮಾಜದಲ್ಲಿ ಎಲ್ಲವನ್ನೂ ಅಳೆದು ತೂಗಿ ನೋಡಬೇಕು, ಸೈಬರ್ ಮಾಧ್ಯಮವನ್ನು ಸಕಾರಾತ್ಮಕವಾಗಿ ಬಳಕೆ ಮಾಡುವ ಬದಲು ನಕಾರಾತ್ಮಕವಾಗಿ ಬಳಸಿ ಅಭದ್ರತೆ ಸೃಷ್ಟಿಸುತ್ತಿರುವ ಸೈಬರ್ ಅಪರಾಧಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಆಯೋಜಿಸಿದ್ದ ಸೈಬರ್ ಫೊರೆನ್ಸಿಕ್ಸ್: ಡಿಜಿಟಲ್ ಡಿಟೆಕ್ಟಿವ್ ವರ್ಕ್ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹ್ಯಾಕರ್ಸ್ಗಳ ಸಂಖ್ಯೆ ಹೆಚ್ಚಾಗಿ ಪ್ರಪಂಚದ ಯಾವ ಮೂಲೆಯಿಂದಲಾದರೂ ನಮ್ಮ ವೈಯಕ್ತಿಕ ಮಾಹಿತಿ, ಖಾಸಗಿ ಬದುಕನ್ನು ತಮ್ಮ ವಶಕ್ಕೆ ಪಡೆಯುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ, ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸಿ ಬ್ಯಾಂಕ್ ಮಾಹಿತಿ ನೀಡುವುದು, ಅನಗತ್ಯವಾಗಿ ಒಟಿಪಿ ಹಂಚಿಕೊಳ್ಳುವುದು, ಸಾಮಾಜಿಕ ಜಾಲಾತಾಣಗಳಲ್ಲಿ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವುದು ಸೈಬರ್ ಅಪರಾಧಿಗಳಿಗೆ ನಾವೇ ಶರಣಾದಂತೆ ಎಂದು ತಿಳಿಸಿದರು.

ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಕಣ್ಣಿಗೆ ಕಾಣದೆ ಯುದ್ಧ ಸಾರುವ ಮಾರ್ಗವನ್ನು ಸೈಬರ್ ಅಪರಾಧಿಗಳು ಮಾಡುತ್ತಿದ್ದಾರೆ, ಮಾಹಿತಿ ಕಳವು ಮಾಡಿ, ವ್ಯಕ್ತಿಯ, ಸಂಸ್ಥೆಯ, ದೇಶದ ಭದ್ರತೆ ನಾಶಪಡಿಸುತ್ತಿದ್ದಾರೆ, ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಅಪರಾಧ ಎಸಗುತ್ತಿರುವವರನ್ನುಅದೇ ಕೃತಕ ಬುದ್ಧಿಮತ್ತೆ ಬಳಸಿ ಅಪರಾಧಿಗಳನ್ನು ಹಿಡಿಯುವ ಪ್ರಯತ್ನವಾಗುತ್ತಿದೆ, ಸೈಬರ್ ಯುದ್ಧ, ಡೀಪ್ ಫೇಕ್, ಸೈಬರ್ ಭಯೋತ್ಪಾದನೆ ಈಗಿನ ಅಭದ್ರತೆ ಎಂದು ಹೇಳಿದರು.

ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ, ಬೆಂಗಳೂರು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕ ಪ್ರೊ.ಎಂ.ಹನುಮಂತಪ್ಪ, ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಟ್, ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ಆರ್.ರಮಣಿ, ಸಹ ಪ್ರಾಧ್ಯಾಪಕ ಡಾ.ಬಿ.ಎಲ್.ಮುಕುಂದಪ್ಪ, ಎಸ್ ಐ ಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಆಶಾಗೌಡ ಕರೇಗೌಡ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿಕುಮಾರ್.ಡಿ, ತಿಪಟೂರಿನ ಸರ್ಕಾರಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ.ಪ್ರಕಾಶ್.ಬಿ.ಆರ್. ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!