ಜಿಲ್ಲಾಸ್ಪತ್ರೆಯ ಟೆಂಡರ್ನಲ್ಲಿ ಗೋಲ್ಮಾಲ್

83

Get real time updates directly on you device, subscribe now.

ತುಮಕೂರು: ಕಾಮಗಾರಿಗಳ ಗುತ್ತಿಗೆ ನೀಡುವ ಸಮಯದಲ್ಲಿ ಗೋಲ್ಮಾಲ್ ನಡೆಯುವ ಬಗ್ಗೆ ಆರೋಪ ಕೇಳಿಬರುತ್ತವೆ, ಆದರೆ ಜಿಲ್ಲಾ ಆಸ್ಪತ್ರೆಯು ಟೆಂಡರ್ ಕರೆಯುವ ಸಮಯದಲ್ಲೇ ಇಂತಹ ಗೋಲ್ಮಾಲ್ ಪತ್ತೆಯಾಗಿದೆ.
ಜಿಲ್ಲಾ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸಾ ಉಪಕರಣ ಹಾಗೂ ಇತರ ಸಾಮಗ್ರಿಗಳ ಸರಬರಾಜಿಗೆ ಟೆಂಡರ್ ಕರೆದು ಒಂದೇ ದಿನದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಏ. 8 ರಂದು ಪತ್ರಿಕೆಯೊಂದರಲ್ಲಿ ಟೆಂಡರ್ ಪ್ರಕಟಿಸಲಾಗಿದೆ, ಮಾರ್ಚ್ 26ರಿಂದ ಏ. 9 ರಂದು ಮಧ್ಯಾಹ್ನ 4 ಗಂಟೆ ಒಳಗೆ ಟೆಂಡರ್ ಫಾರಂ ಸಲ್ಲಿಸಲು ಅವಕಾಶ ನೀಡಲಾಗಿದೆ. ಏ. 9ರಂದು ಮಧ್ಯಾಹ್ನ 3 ಗಂಟೆಗೆ ತಾಂತ್ರಿಕ ಲಕೋಟೆ ತೆರೆಯಲಾಗುವುದು ಎಂದು ತಿಳಿಸಿದೆ, ಮಾರ್ಚ್ 26 ಅಥವಾ ಅದಕ್ಕೂ ಮೊದಲು ಟೆಂಡರ್ ಆಹ್ವಾನಿಸದೆ ಕೊನೆ ಒಂದು ದಿನ ಕಾಲಾವಕಾಶ ಇರುವಾಗ ಪ್ರಕಟಿಸಲಾಗಿದೆ. ಏ. 9ರಂದು ಮಧ್ಯಾಹ್ನ 4 ಗಂಟೆವರೆಗೂ ಸಮಯಾವಕಾಶ ನೀಡಿ ಮಧ್ಯಾಹ್ನ 3 ಗಂಟೆಗೆ ಲಕೋಟೆ ತೆರೆಯಲಾಗುವುದು ಎಂದು ಷರತ್ತು ವಿಧಿಸಲಾಗಿದೆ.
ಟೆಂಡರ್ ಎಲ್ಲಿ ಪ್ರಕಟವಾಗಿದೆ ಎಂಬುದು ಗೊತ್ತಿಲ್ಲ, ಪರಿಶೀಲಿಸಲಾಗುವುದು, ತಪ್ಪುಗಳಾಗಿದ್ದರೆ ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಬಾಬು ತಿಳಿಸಿದರು.
ಒಟ್ಟಾರೆ ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಗೋಲ್ಮಾಲ್ ನಡೆಯುತ್ತಿದ್ದು, ಈಗ ಟೆಂಡರ್ ಗೋಲ್ಮಾಲ್ ಬಯಲಾಗಿದೆ, ಟೆಂಡರ್ ಹಾಕಲು ಬಂದರೆ ಇಲ್ಲಿನ ಕೆಲ ಸಿಬ್ಬಂದಿ ಯಾಕೆ ಟೆಂಡರ್ ಹಾಕ್ತೀರಿ, ಅದು ಹಣ ಬರಲ್ಲ ಎಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಇಲ್ಲಿನ ಸಿಬ್ಬಂದಿ ಮಾಡುವ ಅವ್ಯವಹಾರ ಡಿಸ್ಟಿಕ್ ಸರ್ಜನ್ ಅವರ ಗಮನಕ್ಕೆ ಬಾರದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹನುಮಂತಪುರದ ಟೆಂಡರ್ದಾರರೊಬ್ಬರು ದೂರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!