ಕುಣಿಗಲ್: ಮನುಷ್ಯ ದೀಪದಂತೆ ಸದಾ ಪ್ರಜ್ವಲವಾಗಿ ಬೆಳಗಿ ಮತ್ತೊಬ್ಬರಿಗೆ ಸಹಕಾರಿಯಾಗಿ ಬದುಕುವ ಮೂಲಕ ಜೀವನ ಸಾರ್ಥಕತೆ ಪಡೆಯಬೇಕೆಂದು ದೊಂಬರಹಟ್ಟಿ ಶ್ರೀಶನೇಶ್ವರ ಸ್ವಾಮಿ ಕ್ಷೇತ್ರದ ಪ್ರಧಾನ ಅರ್ಚಕ ಡಾ.ಆನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಯಡೆಯೂರು ಹೋಬಳಿಯ ದೊಂಬರಹಟ್ಟಿ ಶ್ರೀಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಕಡೆ ಕಾರ್ತೀಕ ಸೋಮವಾರದ ಅಂಗವಾಗಿ ಹಮ್ಮಿಕೊಳ್ಳಲಾದ 13ನೇವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಭಕ್ತರೊಂದಿಗೆ ಒಡಗೂಡಿ ದೀಪ ಹಚ್ಚುವ ಮೂಲಕ ಚಾಲನೆ ನೀಡಿ, ದೀಪೋತ್ಸವ ಹಲವು ಸಂದೇಶ ನೀಡುವ ಉತ್ಸವಗಳಾಗಿದೆ, ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವ ದೀಪೋತ್ಸವಗಳಿಗೆ ಭಕ್ತರು ಬಂದು ತಮ್ಮ ಕಷ್ಟವನ್ನು ಶ್ರೀಸ್ವಾಮಿಗೆ ಅರ್ಪಿಸಿ, ತೃಪ್ತಿ ಭಾವನೆಯಿಂದ ಧಾರ್ಮಿಕ ಸೇವೆ ಸಲ್ಲಿಸಿ ನೆಮ್ಮದಿ ಹೊಂದುವ ಉತ್ಸವವಾಗಿದೆ, ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಮುಂದುವರೆದರೂ ನಮ್ಮ ದೇಶದ ಧಾರ್ಮಿಕ ಸತ್ಸಂಪ್ರದಾಯಗಳು ನಡೆಯುತ್ತಲೆ ಇರುತ್ತವೆ, ಎಲ್ಲಿಯವರೆಗೂ ಮನುಷ್ಯ ಧರ್ಮದ ನೆರಳಲ್ಲಿ ನಡೆಯುತ್ತಾನೋ ಅಲ್ಲಿಯವರೆಗೂ ಆತನ ಜೀವನ ನೆಮ್ಮದಿಯುತವಾಗಿ ಇರುತ್ತದೆ ಎಂದರು.
ತಾಲೂಕು ಸೇರಿದಂತೆ ತುಮಕೂರು ಜಿಲ್ಲೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಬೆಳಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದ್ದು ರಾತ್ರಿ ಲಕ್ಷ ದೀಪೋತ್ಸವದ ಬೆಳಕಿನಲ್ಲಿ ಕ್ಷೇತ್ರದ ಗುರುಗಳಾ ಗಂಗರಾಜು ಸ್ವಾಮೀಜಿ ಹಾಗೂ ಶ್ರೀಶನೇಶ್ವರ ಸ್ವಾಮಿಯ ರಥೋತ್ಸವ ನಡೆದವು, ತಡರಾತ್ರಿ ವರೆಗೂ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಗಂಗರಾಜು ಗುರುಗಳ ಧರ್ಮಪತ್ನಿ ಗೌರಮ್ಮ, ಅರ್ಚಕ ಕುಮಾರ್ ಸೇರಿದಂತೆ ಇತರೆ ಗಣ್ಯರು ಹಾಜರಿದ್ದರು.
Comments are closed.