ಹುಳಿಯಾರು: ಬೆಂಕಿಯ ಅವಘಡದಿಂದ ನೂರಾರು ಸಾಕು ಪ್ರಾಣಿಗಳು ಜೀವಂತ ದಹನವಾಗಿರುವ ಘಟನೆ ರಾಮಘಟ್ಟದಲ್ಲಿ ಸಂಭವಿಸಿದೆ.
ಚಿಕ್ಕನಾಯಕನ ಹಳ್ಳಿ ತಾಲೂಕು ಹಂದನಕೆರೆ ಹೋಬಳಿಯ ರಾಮಘಟ್ಟದ ನಿವಾಸಿ ರೈತ ಚೇತನ್ ಕೃಷಿ ಜೊತೆಗೆ ನೂರಾರು ಸಾಕು ಪ್ರಾಣಿಗಳನ್ನ ಸಾಕಾಣಿಕೆ ಮಾಡುತ್ತ ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದರು.
ಇವರ ಮನೆಯ ಸಮೀಪದಲ್ಲೆ ಇದ್ದ ಇವರ ದನದ ಕೊಟ್ಟಿಗೆಯಲ್ಲಿ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ, ಇದು ಇಡೀ ಕೊಟ್ಟಿಗೆಯನ್ನ ಸಂಪೂರ್ಣವಾಗಿ ಆವರಸಿಕೊಂಡಿದೆ, ತಕ್ಷಣ ಸಾರ್ವಜನಿಕರು ಆಗಮಿಸಿ ಬೆಂಕಿ ನಂದಿಸುವ ಕೆಲಸವನ್ನ ನಡೆಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳಿಯ ಪೊಲೀಸರು ಆಗಮಿಸಿ ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ, ಆದರೆ ಯಾವುದೆ ಪ್ರಯೋಜನವಾಗಿಲ್ಲ, ಪರಿಣಾಮ ಈ ದುರ್ಘಟನೆಯಿಂದ ದನದ ಕೊಟ್ಟಿಗೆಯಲ್ಲಿದ್ದ ಸುಮಾರು 100 ಕುರಿ, 6 ಸೀಮೆ ಹಸು, 150 ಕೋಳಿ, ನಾಯಿ ಸುಟ್ಟು ಕರಕಲಾಗಿ ಹೋಗಿವೆ, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ, ಈ ಬೆಂಕಿಯ ಅವಘಡ ಆಕಸ್ಮಿಕವೇ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಸರ್ಕಾರ ರೈತನಿಗಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Comments are closed.