ನಾಪತ್ತೆಯಾಗಿದ್ದ ಪೇದೆ ಪತ್ತೆ

132

Get real time updates directly on you device, subscribe now.


ಮಧುಗಿರಿ: ಕಳೆದ ಐದು ದಿನ ಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಮಂಗಳವಾರ ಅನಂತಪುರದಲ್ಲಿ ಪತ್ತೆಯಾಗಿದ್ದಾರೆ.
ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಕಳೆದ ಎರಡುವರೆ ವರ್ಷಗಳಿಂದ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರೇಶ್ ಡಿ.7 ರ ಸಂಜೆ ಮಧುಗಿರಿ- ಪಾವಗಡ ಕೆಶಿಪ್ ರಾಜ್ಯ ಹೆದ್ದಾರಿ ಮಿಡಿಗೇಶಿ ಹೋಬಳಿ ಬಿದರೆ ಕೆರೆ ಬಳಿ ದ್ವಿಚಕ್ರ ವಾಹನ ಹಾಗೂ ಬಟ್ಟೆ, ಮೊಬೈಲ್ ಕೆರೆಯ ಸಮೀಪ ಬಿಟ್ಟು ಹೋಗಿದ್ದರು.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದ ನಿವಾಸಿಯಾಗಿರುವ ವೀರೇಶ್ ನೆರೆಯ ಸೀಮಾಂಧ್ರದ ಅನಂತರಪುರ ನಗರದಲ್ಲಿ ಪತ್ತೆಯಾಗಿದ್ದು, ಇಷ್ಟೂ ದಿನ ಇವರು ಅನಂತರಪುರ ನಗರದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಜೊತೆಯಲ್ಲಿ ವಾಸವಿದ್ದರೆಂದು ತಿಳಿದು ಬಂದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದು ಮನನೊಂದು ಹೋಗಿದ್ದರೆಂದು ಹೇಳಲಾಗುತ್ತಿದೆ.
ಮಿಡಿಗೇಶಿ ಪೊಲೀಸ್ ಠಾಣೆಯ ಪಿ ಎಸ್ ಐ ಮಹಮದ್ ಪೈಗಂಬರ್, ಅಮ್ಮಣಗಿ ಹಾಗೂ ಪೇದೆಗಳಾದ ಪ್ರಕಾಶ್, ಗೋಪಾಲ ಕೃಷ್ಣ ಅವರು ಮಿಡಿಗೇಶಿ ಠಾಣೆಗೆ ಪೇದೆಯನ್ನು ಕರೆ ತಂದಿದ್ದು ಆರೋಗ್ಯ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಹೋಗಲಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.

Get real time updates directly on you device, subscribe now.

Comments are closed.

error: Content is protected !!