ಮತ್ತೊಬ್ಬರ ಪ್ರಾಣ ಉಳಿಸಲು ರಕ್ತದಾನ ಮಾಡಿ

64

Get real time updates directly on you device, subscribe now.


ತುಮಕೂರು: ಪ್ರಾಣ ಉಳಿಸುವ ಬಿಂದುವಾಗಿರುವ ರಕ್ತದಾನ ಶ್ರೇಷ್ಠ ದಾನವಾಗಿದೆ, ಪೌಷ್ಟಿಕ ಆಹಾರ ಸೇವಿಸುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ, ರಕ್ತದಾನ ಮಾಡಿ ಪ್ರಾಣ ಉಳಿಸುವ ಅರ್ಹ ನಾಗರಿಕರಾಗುತ್ತೇವೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ ತುಮಕೂರಿನ ಎಚ್ ಡಿ ಎಫ್ ಸಿ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಶಾರೀರಿಕ ಬೆಳವಣಿಗೆಗಾಗಿ ಆಹಾರ, ಮಾನಸಿಕ ಸದೃಢತೆಗಾಗಿ ಯೋಗ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ, ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸುತ್ತಿದ್ದಾರೆ, ಇಂತಹ ಸಮಾಜಮುಖಿ ಕಾರ್ಯ ಮಾಡುವವರು ಎಂದಿಗೂ ಅಮರರಾಗಿರುತ್ತಾರೆ ಎಂದರು.

ವಿವಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ಶ್ರೀನಿವಾಸ.ಎಸ್. ಮಾತನಾಡಿ, ಮನುಷ್ಯನಿಗೆ ಬಹಳಷ್ಟು ಅಗತ್ಯಗಳಿರುತ್ತವೆ, ಮನಃಪೂರ್ವಕವಾಗಿ ತೃಪ್ತಿಪಡಿಸುವುದು ಆಹಾರ ಮಾತ್ರ, ಗುಣಮಟ್ಟದ ಆಹಾರ ಸೇವನೆ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ತಿಳಿಸಿದರು.

ರಕ್ತದಾನ ಶಿಬಿರದಲ್ಲಿ ಒಟ್ಟಾರೆಯಾಗಿ 100ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು. ವಿವಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮುಕುಂದಪ್ಪ.ಬಿ.ಎಲ್, ಯುವ ರೆಡ್ ಕ್ರಾಸ್ ಘಟಕದ ಸಮನ್ವಯಾಧಿಕಾರಿ ಡಾ.ಪೂರ್ಣಿಮಾ.ಡಿ, ಎಚ್ ಡಿ ಎಫ್ ಸಿ ಬ್ಯಾಂಕ್ ನ ಬ್ರಾಂಚ್ ಆಪರೇಷನ್ ಮ್ಯಾನೇಜರ್ ವಿಜಯ್ ಕುಮಾರ್, ವಿಶ್ವನಾಥ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!