ಮಧುಗಿರಿ: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಗುರುವಾರ ಪಟ್ಟಣದ ತುಮಕೂರು ಗೇಟ್ ಬಳಿ ಇರುವ ಮುಖ್ಯ ಅಂಚೆ ಕಚೇರಿಯ ಮುಂಭಾಗ ಅನಿರ್ದಿಷ್ಟಾವಧಿ ನಡೆಸಿದರು.
ಸಂಘದ ಖಜಾಂಚಿ ಪಿ.ಎಸ್.ಶಶಿಕುಮಾರ್ ಮಾತನಾಡಿ, ನೌಕರರಿಗೆ ಎಐಜಿಡಿಎಸ್, ಯುಎನ್ಯು ಜಿಡಿಎಸ್ ಮತ್ತು ಎಐಪಿಇಯುಜಿಡಿಎಸ್ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ನೌಕರರಿಗೆ 8 ಗಂಟೆಗಳ ಕೆಲಸ ನೀಡಿ ನಿವೃತ್ತಿ ವೇತನ ಸೇರಿದಂತೆ ಎಲ್ಲಾ ಸವಲತ್ತು ನೀಡಬೇಕು, ಕಮಲೇಶ್ ಚಂದ್ರ ಸಮಿತಿ ವರದಿಯಂತೆ ಈಡೇರದೇ ಇರುವ ಶಿಫಾರಸ್ಸುಗಳಾದ ಟಿಆರ್ಸಿಎ ವೇತನ ಪರಿಷ್ಕರಣೆ ನೀಡಬೇಕು, 12 ವರ್ಷ, 24 ವರ್ಷ ಮತ್ತು 36 ವರ್ಷ ಸೇವೆ ಸಲ್ಲಿಸಿರುವವರಿಗೆ ಹೆಚ್ಚುವರಿ ಇಂಕ್ರಿಮೆಂಟ್ ನೀಡಬೇಕು, ಡಿಜಿಡಿಎಸ್ ನೌಕರರು ಮತ್ತು ಕುಟುಂಬದವರಿಗೆ ಆರೋಗ್ಯ ವಿಮೆ ನೀಡಬೇಕು, ನೂತನವಾಗಿ ನೇಮಕಾತಿ ಹೊಂದಿದ ನೌಕರರಿಗೆ ಕೆಲಸದ ಹೊರೆ ಆಧಾರದ ಮೇಲೆ ವೇತನ ನಿಗದಿಗೊಳಿಸಬೇಕು, ನೌಕರರು ತಮ್ಮ ಸ್ವಂತ ಮೊಬೈಲ್ ನಲ್ಲೇ ಇಲಾಖಾ ಕೆಲಸ ನಿರ್ವಹಿಸಬೇಕೆಂದು ಒತ್ತಾಯಿಸುವುದು, ಅವೈಜ್ಞಾನಿಕ ಟಾರ್ಗೆಟ್ ಗಳನ್ನು ತಕ್ಷಣವೇ ನಿಲ್ಲಿಸಬೇಕು, ಎಲ್ಲಾ ಬಿಓ ಗಳಿಗೆ ಲ್ಯಾಪ್ ಟಾಪ್, ಪ್ರಿಂಟರ್, ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ನೀಡಬೇಕು ಎಂದು ಒತ್ತಾಯಿಸಿದರು.
ಮುಷ್ಕರದಲ್ಲಿ ಹಿರಿಯ ನಿವೃತ್ತ ನೌಕರ ಪುಟ್ಟಯ್ಯ ಭಾಗವಹಿಸಿ ಬೆಂಬಲ ಬ್ಯಕ್ತಪಡಿಸಿದರು. ಸದಸ್ಯರಾದ ಬಿ.ಆರ್.ವಿಜಯ ಕುಮಾರ್, ಎಂ.ಜೆ.ಕೃಷ್ಣಪ್ಪ, ಅಶ್ವತ್ಥ ನಾರಾಯಣ, ಎಂ.ಆರ್.ನಾಗರಾಜು, ರಜಿಯಾ ಸುಲ್ತಾನ, ಶಾಂತಮ್ಮ ಇತರರು ಭಾಗವಹಿಸಿದ್ದರು.
Comments are closed.