ಶಿರಾ: ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪುರುಷರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಶಿರಾ ತಾಲ್ಲೂಕು ಜೋಗಿಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುರುವಾರ ಮಧ್ಯಾಹ್ನ ಜರುಗಿದೆ.
ಮೃತರನ್ನು ಜೋಗಿಹಳ್ಳಿ ಗ್ರಾಮದ ಶ್ರೀಧರ್ (28) ಮತ್ತು ಮುನಿರಾಜು (25) ಎಂದು ಗುರುತಿಸಲಾಗಿದೆ, ಮುನಿರಾಜುವಿಗೆ ಆರೋಗ್ಯದ ಸಮಸ್ಯೆ ಇದ್ದು, ಚಿಕಿತ್ಸೆಗಾಗಿ ತುಮಕೂರಿಗೆ ತೆರಳುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಹಿಂದಿನಿಂದ ಬಂದ ಮಾರುತಿ ಬೊಲೆನೋ ಕಾರೊಂದು ಡಿಕ್ಕಿ ಹೊಡೆದಿದೆ, ಕಾರಿಗೆ ಸಿಲುಕಿದ ಬೈಕ್ ಹತ್ತಾರು ಮೀಟರ್ ರಸ್ತೆಯಲ್ಲಿ ತಳ್ಳಿಕೊಂಡು ಹೋಗಿದ್ದು, ಅಪಘಾತದ ತೀವ್ರತೆ ತೋರಿಸುತ್ತದೆ, ಮೃತ ಶ್ರೀಧರ್ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದು, ಇವರಿಗೆ ಒಂದು ತಿಂಗಳ ಮಗುವಿದೆ ಎಂದು ತಿಳಿದು ಬಂದಿದೆ, ಘಟನಾ ಸ್ಥಳದಲ್ಲಿ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು, ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೋಗಿ ಹಳ್ಳಿಯಿಂದ ಸೀಬಿ ದೇವಸ್ಥಾನದ ವರೆಗೆ ಸರ್ವೀಸ್ ರಸ್ತೆ ಇಲ್ಲದಿರುವುದು, ಸಾಕಷ್ಟು ಅಪಘಾತಗಳಿಗೆ ಕಾರಣವಾಗಿದೆ, ಅಪಘಾತಗಳ ಬಗ್ಗೆ ಅರಿವಿದ್ದರೂ ಈ ಭಾಗದಲ್ಲಿ ಸರ್ವೀಸ್ ರಸ್ತೆ ಮಾಡಲು ಹೈವೇ ಅಥಾರಿಟಿ ಮತ್ತು ಟೆಂಡರ್ ಪಡೆದಿರುವ ಕಂಪನಿ ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
Comments are closed.