ಐತಿಹಾಸಿಕ ಗೂಳೂರು ಗಣೇಶ ವಿಸರ್ಜನೆಗೆ ಸಿದ್ಧತೆ

62

Get real time updates directly on you device, subscribe now.


ತುಮಕೂರು: ಇತಿಹಾಸ ಪ್ರಸಿದ್ದ ಗೂಳೂರು ಗಣೇಶನ ಉತ್ಸವ ಹಾಗೂ ವಿಸರ್ಜನಾ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ 16ರ ಶನಿವಾರ ಮತ್ತು 17ರ ಭಾನುವಾರ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾಗುವಂತೆ ಶ್ರೀಮಹಾ ಗಣಪತಿ ಭಕ್ತ ಮಂಡಳಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಎಸ್.ಶಿವಕುಮಾರ ಮನವಿ ಮಾಡಿದ್ದಾರೆ.

ದೀಪಾವಳಿಯ ದಿನದಂದ ಆರಂಭಗೊಂಡಿರುವ ಪೂಜೆ ಕಾರ್ತಿಕ ಮಾಸದುದ್ದಕ್ಕೂ ನಡೆದಿದ್ದು, ಹಿರಿಯರ ತೀರ್ಮಾನದಂತೆ ಡಿಸೆಂಬರ್ 16ರ ಶನಿವಾರ ಉತ್ಸವ ನಡೆಸಿ ಡಿಸೆಂಬರ್ 17ರ ಭಾನುವಾರ ಗೂಳೂರು ಕೆರೆಯಲ್ಲಿ ವಿಸರ್ಜಿಸಲು ತೀರ್ಮಾನಿ ಸಲಾಗಿದೆ, ಡಿಸೆಂಬರ್ 16ರ ಸಂಜೆ ಮಹಾ ಮಂಗಳಾರತಿಯ ನಂತರ 18 ಕೋಮಿನ ಜನರು ಸೇರಿ ಸಿದ್ಧಪಡಿಸಿರುವ ಉತ್ಸವ ರಥದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ರಾತ್ರಿ ಮೂರು ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ವಿವಿಧ ಜಾನಪದ ಮತ್ತು ಸಾಂಸ್ಕೃತಿಕ ಕಲಾ ತಂಡಗಳಾದ ಕೀಲುಕುದುರೆ, ಡೊಳ್ಳು ಕುಣಿತ, ಚಂಡೆವಾದ್ಯ, ಕೋಲಾಟ, ಗಾರುಡಿ ಗೊಂಬೆಗಳ ನೃತ್ಯ, ನಾಸಿಕ್ ಡೋಲ್, ಮಂಗಳವಾದ್ಯ ಹಾಗೂ ಅಕರ್ಷಕ ಸಿಡಿ ಮದ್ದಿನ ಪ್ರದರ್ಶನದ ನಡುವೆ ಸ್ವಾಮಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ, ಉತ್ಸವದ ನಂತರ ಊರಿನ ಮಧ್ಯ ಭಾಗದಲ್ಲಿ ರಥವನ್ನು ಕೆಲ ಕಾಲ ಸಾರ್ವಜನಿಕರು ಮತ್ತು ಭಕ್ತರ ದರ್ಶನಕ್ಕಾಗಿ ಇಡಲಾಗುವುದು ಎಂದರು.

ಡಿಸೆಂಬರ್ 17ರ ಭಾನುವಾರ ಮಧ್ಯಾಹ್ನ 12 ಗಂಟೆಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ಈ ವೇಳೆ ಗ್ರಾಮದ ಮಹಿಳೆಯರು ತಮ್ಮ ಮನೆಗಳ ಮುಂದೆ ತಳಿರು ತೋರಣಗಳಿಂದ ಸಿಂಗರಿಸಿ, ಬಣ್ಣ ಬಣ್ಣದ ರಂಗೋಲಿ ಹಾಕಿ ಗಣೇಶ ಮೂರ್ತಿಗೆ ಹಣ್ಣು, ಕಾಯಿ, ಪೂಜಾ ಸಾಮಗ್ರಿ ಅರ್ಪಿಸಿ ಕೃತಾರ್ಥ ರಾಗುತ್ತಾರೆ, ಮಧ್ಯಾಹ್ನ ಮೂರು ಗಂಟೆಯವರಗೆ ಮೆರವಣಿಗೆ ನಡೆಸಿದ ನಂತರ ಗೂಳೂರು ಕೆರೆಯಲ್ಲಿ ವಿಸರ್ಜಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯದಾದ್ಯಂತ ಭಕ್ತರನ್ನು ಹೊಂದಿರುವ ಗೂಳೂರು ಗಣೇಶನ ವಿಸರ್ಜನಾ ಮಹೋತ್ಸವದಲ್ಲಿ ಗೂಳೂರು ಮತ್ತು ಸುತ್ತಮುತ್ತಲ ಗ್ರಾಮಗಳ ಎಲ್ಲಾ ಕೋಮಿನ ಜನರು ಭಾಗವಹಿಸಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಿವಕುಮಾರ್ ಮನವಿ ಮಾಡಿದರು.

ಗೂಳೂರು ಗಣೇಶ ಜಾತ್ರಾ ಅಂಗವಾಗಿ ಡಿಸೆಂಬರ್ 18ರ ಸೋಮವಾರ ಬೆಳಗ್ಗೆ 11 ಗಂಟೆಗೆ ಶ್ರೀಗೂಳೂರು ಮಹಾ ಗಣಪತಿ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಅಬ್ಬಯ್ಯವಾಯ್ಡು ಕಾರ್ಮಿಕರ ಕಲಾ ಸಂಘದ ವತಿಯಿಂದ ಭಕ್ತ ಪ್ರಧಾನ ಪೌರಾಣಿಕ ನಾಟಕ ನಲ್ಲತಂಗ ಅಥವಾ ಶನಿಪ್ರಭಾವ ನಾಟಕದ ಪ್ರದರ್ಶನವನ್ನು ಸಂಗೀತ ನಿರ್ದೇಶಕ ಎಸ್.ಎಲ್ ಲಕ್ಷ್ಮಿನಾರಾಯಣ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಆಗಮಿಸಿ ನಾಟಕ ವೀಕ್ಷಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!