ಕುಣಿಗಲ್: ಮಕ್ಕಳಿದ್ದರೂ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆ ಶಾಸಕರ ಬಳಿ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಶಾಸಕರ ಸೂಚನೆ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತ ಧನಸಹಾಯ ಮಾಡಿ ಮಹಿಳೆಯ ಮನೆಗೆ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ವೃದ್ಧೆಯ ಮನೆಗೆ ಬೆಳಕು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬಿಳಿ ದೇವಾಲಯ ಗ್ರಾಮ ಪಂಚಾಯತಿ ಬೋರಲಿಂಗನಪಾಳ್ಯ ಲಂಬಾಣಿ ತಾಂಡ್ಯದ ಸಾಕಿಬಾಯಿ ಎಂಬ ಸುಮಾರು 60 ವರ್ಷದ ವೃದ್ಧೆ ಅವರಿವರ ನೆರವಿನಿಂದ ಮನೆ ಕಟ್ಟಿಕೊಂಡಿದ್ದರು, ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆ ಕಟ್ಟಿಕೊಂಡ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಹಣಕಾಸಿನ ವ್ಯವಸ್ಥೆ ಇಲ್ಲದೆ ಸುಮಾರು 20 ವರ್ಷಗಳಿಂದ ಕತ್ತಲೆ ಮನೆಯಲ್ಲಿ ವಾಸವಿದ್ದರು. ಗ್ರಾಮಕ್ಕೆ ಶಾಸಕರು ಭೇಟಿ ನೀಡಿದ್ದ ವೇಳೆ ತನ್ನ ಅಳಲುತೋಡಿಕೊಂಡಿದ್ದರು, ಶಾಸಕ ಡಾ ರಂಗನಾಥಣ್ಣ ಅವರ ಸೂಚನೆ ಮೇರೆಗೆ ಬೋರಲಿಂಗನಪಾಳ್ಯ ಗ್ರಾಮದ ಕಾಂಗ್ರೆಸ್ ಯುವ ಮುಖಂಡರಾದ ಜಯಕುಮಾರ್ ವೃದ್ಧೆಯ ಮನೆಯ ದಾಖಲೆ ಸಂಗ್ರಹಿಸಿ ಬೆಸ್ಕಾಂ ಸಂಪರ್ಕಕ್ಕಾಗಿ ಕಚೇರಿಗೆ ಹಾಗೂ ಮನೆಯಲ್ಲಿ ವಿದ್ಯುತ್ ವ್ಯವಸ್ಥೆಗೆ ತಾವೆ ಸುಮಾರು 15000 ಸಾವಿರ ಖರ್ಚು ಮಾಡಿ ಎರಡು ದಶಕದಿಂದ ಕತ್ತಲಲ್ಲೆ ಕಾಲ ಕಳೆಯುತ್ತಿದ್ದ ವೃದ್ಧೆಯ ಮನೆಗೆ ಬೆಳಕು ನೀಡಿದ್ದಾರೆ.
ವೃದ್ಧೆ ಮನೆಗೆ ವಿದ್ಯುತ್ ಸಂಪರ್ಕ
Get real time updates directly on you device, subscribe now.
Prev Post
Next Post
Comments are closed.