ರಸ್ತೆ ಅಪಘಾತದಲ್ಲಿ ಇಬ್ಬರು ಸಾವು

82

Get real time updates directly on you device, subscribe now.


ತುಮಕೂರು: ನಗರದಲ್ಲಿ ತಡ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ನಗರದ ಶೆಟ್ಟಿಹಳ್ಳಿ ಸರ್ಕಲ್ ಬಳಿ ಘಟನೆ ಸಂಭವಿಸಿದ್ದು, ಬಾಲಕರಿದ್ದ ಸ್ಕೂಟಿ ಮತ್ತು ಇನೋವಾ ಕಾರು ನಡುವೆ ಡಿಕ್ಕಿ ಸಂಭವಿಸಿದೆ, ಘಟನೆಯಲ್ಲಿ ಪ್ರಥಮ್ (15) ಹಾಗೂ ವಿಜಯ್ (15) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಬಾಲಕರು ಕೌತಮಾರನಹಳ್ಳಿಯ ನಿವಾಸಿಗಳಾಗಿದ್ದು, ಎಸ್ಸೆಸ್ಸೆಲ್ಸಿ ಓದುತ್ತಿದ್ದರು, ವಿಲೇಜ್ ಅಕೌಂಟೆಂಟ್ ಆಗಿರುವ ಬಾಲಕರ ಅಕ್ಕನನ್ನು ಮನೆಗೆ ಕರೆದುಕೊಂಡು ಬರಲು ಹೋಗುವಾಗ ಘಟನೆ ಸಂಭವಿಸಿದೆ. ಶೆಟ್ಟಿಹಳ್ಳಿ ಕಡೆಯಿಂದ ಬಂದ ಇನೋವಾ ಕಾರಿಗೆ ಸ್ಕೂಟಿ ಡಿಕ್ಕಿಯಾಗಿದೆ, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!