ಮುಂದಿನ ಪೀಳಿಗೆಗೆ ಜೀವಜಲ ರಕ್ಷಿಸಿ: ಬೈರಪ್ಪ

233

Get real time updates directly on you device, subscribe now.

ತುರುವೇಕೆರೆ: ಅಮೂಲ್ಯ ಜೀವ ಜಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಮಹತ್ತರ ಜವಾಬ್ದಾರಿ ಸಮಾಜದ ಎಲ್ಲರದ್ದಾಗಿದೆ ಎಂದು ತಾಪಂ ಉಪಾಧ್ಯಕ್ಷ ಭೈರಪ್ಪ ತಿಳಿಸಿದರು.
ತಾಲೂಕಿನ ಶೆಟ್ಟಿಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಚನ್ನಿಗಯ್ಯನಪಾಳ್ಯದಲ್ಲಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಅಂತರ್ಜಲ ಕುಸಿತ ಹೆಚ್ಚಾಗುತ್ತಿದ್ದು ಜನ ಜಾನುವಾರು, ಪಕ್ಷಿಗಳು ಜೀವಜಲಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಂಡಿರುವುದು ಶೋಚನೀಯ, ಪೂರ್ವಿಕರು ನಿರ್ಮಾಣ ಮಾಡಿದ್ದ ಕೆರೆ ಕಟ್ಟೆಗಳನ್ನು ಸಂರಕ್ಷಿಸುವಲ್ಲಿ ವಿಫಲರಾದ ಹಿನ್ನಲೆಯಲ್ಲಿ ಜೀವಜಲ ಕೊರತೆ ಎದುರಿಸುವಂತಾಗಿದೆ ಎಂಬುದನ್ನು ಅರಿಯಬೇಕು, ಸದ್ಯ ಲಭ್ಯವಿರುವ ಭೂಮಿಗೆ ಇಂಗಿಸುವ ಪ್ರಕ್ರಿಯೆ ಮಾಡಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದೇವೆ, ಈ ನಿಟ್ಟಿನ ಸರಕಾರದ ಜಲಶಕ್ತಿ ಯೋಜನೆ ಸಾಕಾರಗೊಳಿಸುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಇಓ ಜಯಕುಮಾರ್ ಮಾತನಾಡಿ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಜಲಶಕ್ತಿ ಅಭಿಯಾನಕ್ಕೆ ಚನ್ನಿಗಯ್ಯನ ಪಾಳ್ಯದಲ್ಲಿ ಚಾಲನೆ ದೊರಕಿಸಲಾಗಿದೆ, ನರೇಗಾ ಯೋಜನೆಯಡಿ ಜಲಶಕ್ತಿ ಯೋಜನೆ ಕಾಮಗಾರಿಗಳನ್ನು ತಮ್ಮ ಜಮೀನಿನ ಬಳಿ ಇರುವ ಹಳ್ಳಕೊಳ್ಳಗಳಲ್ಲಿ ಹಮ್ಮಿಕೊಳ್ಳಬಹುದಾಗಿದೆ, ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪಂಚಾಯಿತಿ ಪಿಡಿಓ ಅವರನ್ನು ಸಂಪರ್ಕಿಸಿ ಅಂತರ್ಜಲದ ಹೆಚ್ಚಳಕ್ಕೆ ಎಲ್ಲರೂ ಕೈಜೋಡಿಸುವ ಮೂಲಕ ಜೀವಜಲ ಕಾಪಾಡುವ ಸಂಕಲ್ಪ ಮಾಡಬೇಕು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಕೆಂಪಣ್ಣ, ಪಿಡಿಓ ಲಿಂಗರಾಜೇಗೌಡ ಹಾಗೂ ಲಾನುಭವಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!