ಕೊಡಿಗೇನಹಳ್ಳಿ: ಸರಕಾರಿ ಕೆಲಸ ಮಾಡಲು ಹಿಂದೇಟು ಹಾಕುವುದು, ಲಂಚದ ಬೇಡಿಕೆ, ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ನೇರವಾಗಿ ಎಸಿಬಿಗೆ ದೂರು ನೀಡಿ ದೂರುದಾರರ ಹೆಸರು ಮತ್ತು ವಿಳಾಸ ಗೌಪ್ಯವಾಗಿ ಇಡಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್ಪೆಕ್ಟರ್ ವಿಜಯಲಕ್ಷ್ಮಿ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಗ್ರಾಪಂ ಆವರಣದಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹದಳ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ಲಂಚ ಕೊಡುವುದು ಮತ್ತು ಪಡೆಯುವುದು ಎರಡು ಶಿಕ್ಷಾರ್ಹ ಅಪರಾಧ, ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಸರಕಾರಿ ಕೆಲಸಗಳಲ್ಲಿ ಹಣದ ದುರುಪಯೋಗ ಹಾಗೂ ಲಂಚ ಹಾಗೂ ಅವ್ಯವಹಾರ ಅನ್ಯಾಯದಂತಹ ‘ಭ್ರಷ್ಟಾಚಾರದ ನಿರ್ಮೂಲನೆಗೆ ಸಾರ್ವಜನಿಕರು ಜಾಗೃತರಾಗಬೇಕು, ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ ಸಾಮಾಜಿಕ ಬದಲಾವಣೆ ಮಾಡಬೇಕು, ಭ್ರಷ್ಟಾಚಾರ ಎಂಬುದು ಸಾಮಾಜಿಕ ಪಿಡುಗಾಗಿದ್ದು ಇದನ್ನು ಬುಡ ಸಮೇತ ಕೀಳಬೇಕು, ಇಲ್ಲದಿದ್ದರೆ ಸಮಾಜ ರೋಗಗ್ರಸ್ಥವಾಗುತ್ತದೆ, ಇದರಿಂದ ದೇಶವು ಕುಂಠಿತವಾಗುತ್ತದೆ ಎಂದರು.
ಗ್ರಾಪಂ ವತಿಯಿಂದ ಪ್ರಚಾರ ಪಡಿಸಿದ್ದರೂ ಸಾರ್ವಜನಿಕರು ಬೆರೆಳೆಯಣಿಕೆಯಷ್ಟು ಮಾತ್ರ ಭಗಿಯಾಗಿದ್ದರಿಂದ ಬೇಸರ ವ್ಯಕ್ತಪಡಿಸಿದರು, ಇಂತಹ ಕಾರ್ಯಕ್ರಮಕ್ಕೆ ಹೆಚ್ಚು ಜನ ಭಾಗವಹಿಸಿಬೇಕು, ಭ್ರಷ್ಟಾಚಾರದ ವಿರುದ್ಧ ವಿದ್ಯಾವಂತ ಯುವಕ ಯುವತಿಯರು ದ್ವನಿ ಎತ್ತುವ ಮೂಲಕ ನೊಂದವರಿಗೆ ನೆರವಾಗಬೇಕು ಎಂದರು.
ನರೇಗಾ, ಅಕ್ರಮ ಈ ಸ್ವತ್ತು, ಇನ್ನಿತರ ಸರಕಾರಿ ಕೆಲಸಗಳಲ್ಲಿ ಅಕ್ರಮದ ಮೂಲಕ ಅನ್ಯಾಯ ಎಸಗಿರುವ ಬಗ್ಗೆ ದೂರುಗಳಿದ್ದರೆ ಮುಕ್ತವಾಗಿ ಯಾವುದೆ ಖರ್ಚಿಲ್ಲದೆ ನೇರವಾಗಿ ಇಲಾಖೆಗೆ ದೂರು ಸಲ್ಲಿಸಿ, ಇಲಾಖೆಗೆ ಅನಾಮದೇಯ ಅರ್ಜಿಗಳು ಬಂದರೆ ಅಂತಹವು ಸ್ವೀಕೃತವಾಗುವುದಿಲ್ಲ, ಯಾವುದೆ ದೂರು ದುಮ್ಮಾನಗಳಿದ್ದರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೇರವಾಗಿ ಮಾಹಿತಿ ನೀಡಿ ಅಥವಾ ಉಚಿತ ಸಹಾಯವಾಗಿ 1064 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.
ಪಿಡಿಓ ಸತ್ಯನಾರಯಣ, ಗ್ರಾಪಂ ಉಪಾಧ್ಯಕ್ಷ ರಾಜೇಶ್, ವಿಎಸ್ಎಸ್ಎನ್ ನ ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸ್, ಗ್ರಾಪಂ ಸದಸ್ಯ ಕೃಷ್ಣ, ಶ್ರೀರಂಗನಾಯ್ಕ, ಮುಖಂಡರಾದ ಮಕ್ತಿಯಾರ್, ಬಾಲಾಜಿ, ಗಂಗಾಧರ್ ಹಾಜರಿದ್ದರು.
ಭ್ರಷ್ಟಾಚಾರದ ವಿರುದ್ಧ ಎಸಿಬಿಗೆ ದೂರು ನೀಡಿ: ವಿಜಯಲಕ್ಷ್ಮಿ
Get real time updates directly on you device, subscribe now.
Prev Post
Next Post
Comments are closed.