ಕೋಣದ ಮರಿಗಳ ರಕ್ಷಣೆ

56

Get real time updates directly on you device, subscribe now.


ಕುಣಿಗಲ್: ಅಕ್ರಮವಾಗಿ ಬೆಂಗಳೂರು ಕಡೆಗೆ ಕೋಣದ ಮರಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಗಸ್ತಿನಲ್ಲಿದ್ದ ಪೊಲೀಸರು
ಕೋಣದ ಮರಿ ಸಾಗಾಣೆ ಮಾಡುತ್ತಿದ್ದ ವಾಹನ, ಚಾಲಕನನ್ನು ವಶಕ್ಕೆ ಪಡೆದು ಕೋಣದ ಮರಿಗಳನ್ನು ರಕ್ಷಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಗವಿಮಠದ ಬಳಿ ಯಡಿಯೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬೊಲೇರೊ ವಾಹನ ತಪಾಸಣೆಗೆ ತಡೆದ ಕುಣಿಗಲ್ ಪೊಲೀಸರು ವಾಹನದಲ್ಲಿ ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ, ಅಮಾನವೀಯವಾಗಿ 14 ಕೋಣದ ಮರಿಗಳನ್ನು ಸಾಗಾಣೆ ಮಾಡುತ್ತಿದ್ದು ಪತ್ತೆಯಾಯಿತು, ಘಟನೆಗೆ ಸಂಬಂಧಿಸಿದಂತೆ ನಂದನ್, ನಾಗರಾಜು ಎಂಬುವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೋಣದ ಮರಿಗಳನ್ನು ರಕ್ಷಣೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!