ಲಾರಿ ಡಿಕ್ಕಿ- ಮಹಿಳೆ ಸಾವು

73

Get real time updates directly on you device, subscribe now.


ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಬದಿ ನಿಂತಿದ್ದ ಮಹಿಳೆಗೆ ಗುದ್ದಿ ಮನೆಯೊಳಗೆ ನುಗ್ಗಿದ ಪರಿಣಾಮ ಮನೆ ಜಖಂಗೊಂಡು ಮಹಿಳೆ ಛಿದ್ರವಾಗಿ ಸ್ಥಳದಲ್ಲೆ ಮೃತಪಟ್ಟ ಧಾರುಣ ಘಟನೆ ರಾಜ್ಯಹೆದ್ದಾರಿ 33ರ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಮಾವತ್ತೂರಿನಲ್ಲಿ ನಡೆದಿದೆ.
ಮೃತಳನ್ನು ವಿನುತ (22) ಎಂದು ಗುರುತಿಸಲಾಗಿದ್ದು, ಈಕೆ ಹುಲಿಯೂರು ದುರ್ಗ ಕಡೆ ಬರಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಹುಲಿಯೂರು ದುರ್ಗ ಕಡೆಯಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದು, ರಸ್ತೆ ಬದಿಯಲ್ಲಿದ್ದ ರಾಮಣ್ಣವರ ಮನೆಗೆ ನುಗ್ಗಿತು, ಮನೆಯ ಮುಂಭಾಗ ಜಖಂಗೊಂಡಿದ್ದು, ಲಾರಿ ಮನೆಯ ಮಧ್ಯೆ ಸಿಲುಕಿದ ಮಹಿಳೆಯ ಶವ ಛಿದ್ರಗೊಂಡಿತ್ತು.
ಘಟನೆಯನ್ನು ತೀವ್ರವಾಗಿ ಖಂಡಿಸಿದ ದೊಡ್ಡ ಮಾವತ್ತೂರು ಗ್ರಾಮಸ್ಥರು ಹೆದ್ದಾರಿಯಲ್ಲಿ ವಾಹನ ವೇಗ ನಿಯಂತ್ರಣಕ್ಕೆ ಗ್ರಾಮದ ರಸ್ತೆಯಲ್ಲಿ ಹಂಪ್ಸ್ ಹಾಕುವಂತೆ ಅಥವಾ ವೇಗ ನಿಯಂತ್ರಣಕ್ಕೆ ಬ್ಯಾರಿಕೇಡ್ ಹಾಕಿ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆಗೆ ಮುಂದಾದರು, ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!