ಸರ್ಕಾರದ ಸಾಲ ಸೌಲಭ್ಯ ಬಳಸಿಕೊಳ್ಳಲು ಕರೆ

383

Get real time updates directly on you device, subscribe now.

ತುಮಕೂರು: ಡಾ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ನಿಗಮದಿಂದ ನೀಡಲಾಗುವ ಸಾಲ ಸೌಲಭ್ಯ ಬಳಸಿಕೊಂಡು ಚರ್ಮ ಕುಶಲ ಕರ್ಮಿಗಳು ಉತ್ತಮವಾಗಿ ಆರ್ಥಿಕ ಜೀವನ ಕಟ್ಟಿಕೊಳ್ಳಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮಾ ತಿಳಿಸಿದರು.
ನಗರದ ಎಂ.ಜಿ.ರಸ್ತೆಯ ಅಂಬೇಡ್ಕರ್ ಭವನದಲ್ಲಿ ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 130 ನೇ ಜನ್ಮದಿನ ಹಾಗೂ ಪರಿವರ್ತನಾ ತಿಂಗಳ ಆಚರಣೆ ಅಂಗವಾಗಿ ನಡೆದ ಪಾದುಕೆ ಕುಟೀರ, ಆಧುನಿಕ ಮಾರಾಟ, ರಸ್ತೆ ಬದಿ ಕುಟೀರ ಯೋಜನೆಯ ಲಾನುಭವಿಗಳಿಗೆ ಸ್ವಚ್ಛತೆ, ಆರ್ಥಿಕ, ಶಿಸ್ತು ಮತ್ತು ವ್ಯಕ್ತಿತ್ವ ವಿಕಸನ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ನಿಗಮದಿಂದ ಅನೇಕ ಸಾಲ ಸೌಲಭ್ಯಗಳ, ತರಬೇತಿಯಂತಹ ಮಹತ್ವಪೂರ್ಣ ಯೋಜನೆಗಳಿವೆ, ಇವುಗಳನ್ನು ಚರ್ಮ ಕುಶಲ ಕರ್ಮಿಗಳು ಸದುಪಯೋಗ ಪಡಿಸಿಕೊಳ್ಳಬೇಕು, ಸಮಾಜ ಕಲ್ಯಾಣ ಇಲಾಖೆಯಿಂದ ಲಾನುಭವಿಗಳ ಮಕ್ಕಳಿಗೆ ಉಚಿತ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಿಗೆ ನುರಿತ ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಮೂಲಕ ಪರೀಕ್ಷಾ ತರಬೇತಿ ನೀಡಲಾಗುವುದು ಕುಶಲ ಕರ್ಮಿಗಳು ಇದರ ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ ಮಾತನಾಡಿ, ಲಿಡ್ಕರ್ ಸಂಸ್ಥೆಯಲ್ಲಿ ಎಂಟಕ್ಕೂ ಅಧಿಕ ಆರ್ಥಿಕ ಭದ್ರತೆ ಒದಗಿಸುವ ಯೋಜನೆಗಳಿವೆ ಲಾನುಭಾವಿಗಳು ವೃತ್ತಿಯನ್ನು ಒಂದು ಉದ್ಯಮವಾಗಿಸುವ ಮೂಲಕ ಕುಶಲಕರ್ಮಿಗಳು ಉನ್ನತ ಜೀವನ ಕಟ್ಟಿಕೊಳ್ಳಬಹುದು, ಅಲ್ಲದೆ ನಿಗಮದ ವತಿಯಿಂದ ಚರ್ಮ ಕುಶಲತೆಯ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಕಲಿಕೆಗೆ ಲಂಡನ್ ನಂತಹ ವಿದೇಶಗಳಲ್ಲಿ ನುರಿತ ಕುಶಲರಿಂದ ತರಬೇತಿ ನೀಡಲಾಗುವುದು ಇಂತಹ ಮಹತ್ವಪೂರ್ಣ ಅವಕಾಶಗಳನ್ನ ಬಳಸಿ ಕುಶಲ ಕರ್ಮಿಗಳು ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.
ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ನಿಗಮದ ಜಿಲ್ಲಾ ಸಂಯೋಜಕ ಜಯದೇವ್ ಮಾತನಾಡಿ ಚರ್ಮವೃತ್ತಿ ಮಾಡುವವರಿಗೆ ಸಾಲ, ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು, ಸ್ಥಳೀಯವಾಗಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಂಬಂಧಿಸಿದವರೊಂದಿಗೆ ಮಾತನಾಡಿ ಚರ್ಮ ಕುಶಲತೆಯ ಬಗ್ಗೆ ಅರಿವು ಮೂಡಿಸಿ ಸಹಕಾರ ಮಾಡಲಾಗುವುದು, ವೃತ್ತಿಪರ ಲಾನುಭವಿಗಳಿಗೆ ನೀವೆಶನಗಳಿದ್ದಲ್ಲಿ ಮನೆ ಮಂಜೂರು ಮಾಡಿಕೊಡಲಾಗುವುದು, ಇದನ್ನು ಕುಶಲ ಕರ್ಮಿಗಳು ಬಳಸಿಕೊಳ್ಳಬೇಕು ಎಂದರು.
ಜಿಲ್ಲಾ ಚರ್ಮ ಕುಶಲ ಕರ್ಮಿಗಳ ಸಂಘದ ಅಧ್ಯಕ್ಷ ಗೋಪಾಲ್ ಮಾತನಾಡಿ, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಚರ್ಮ ಕುಶಲಕರ್ಮಿಗಳಿಗೆ ಕುಟೀರಗಳನ್ನು ಸ್ಥಾಪಿಸಿಲು ಅನುಮತಿ ಕಲ್ಪಿಸಬೇಕು, ಜೊತೆಗೆ ಅದಕ್ಕೆ ಬೆಳಕಿನ ವ್ಯವಸ್ಥೆ, ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು ಹಾಗೂ ಲಾನುಭವಿಗಳಿಗೆ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲು ಕಂದಾಯ ಇಲಾಖೆ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಲಕ್ಷ್ಮೀರಂಗಯ್ಯ, ಪಾಲಸಂದ್ರ ಹನುಮಂತರಾಯಪ್ಪ ಅವರು ಅಂಬೇಡ್ಕರ್ ಮತ್ತು ಜಗಜೀವನ್ ರಾಂ ಅವರ ಜೀವನ ಚರಿತ್ರೆ ಹಾಗೂ ಕೊಡುಗೆಗಳ ಬಗ್ಗೆ ಲಾನುಭವಿಗಳೊಂದಿಗೆ ವಿಚಾರ ಹಂಚಿಕೊಂಡರು.
ಈ ವೇಳೆ ನಿಗಮದ ಫಲಾನುಭವಿಗಳು ಸೇರಿದಂತೆ ಅಧಿಕಾರಿ ವರ್ಗ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!