ತುಮಕೂರು: ಕ್ರಿಸ್ ಮಸ್ ಹಬ್ಬ ಹಾಗೂ ಹೊಸ ವರ್ಷದ ಶುಭಾಶಯ ಕೋರುವ ಸಲುವಾಗಿ ಕ್ರೈಸ್ತ ಬಾಂಧವರು ನಗರದಲ್ಲಿ ಜಾಥಾ ನಡೆಸಿದರು.
ನಗರದ ಕುಣಿಗಲ್ ಸರ್ಕಲ್ನಿಂದ ಕ್ರೈಸ್ತ ಬಾಂಧವರ ಕ್ರಿಸ್ ಮಸ್ ಹಬ್ಬ ಮತ್ತು ಹೊಸ ವರ್ಷದ ಶುಭಾಶಯ ಕೋರುವ ಜಾಥಾವನ್ನು ಯುನೈಟೆಡ್ ಕ್ರಿಶ್ಚಿಯನ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಪಾಸ್ಟರ್ ಜಾಯ್ ಕಟ್ಟಿ ಅವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು.
ಕುಣಿಗಲ್ ಸರ್ಕಲ್ ನಿಂದ ಆರಂಭವಾದ ಈ ಜಾಥಾವು ಟೌನ್ ಹಾಲ್ ಮಾರ್ಗವಾಗಿ ಬಸ್ ನಿಲ್ದಾಣದ ಮುಖೇನ ಚರ್ಚ್ ಸರ್ಕಲ್, ಬಾವಿಕಟ್ಟೆ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಸಾಗಿ ಕಾಳಿದಾಸ ಸರ್ಕಲ್ ಮಾರ್ಗವಾಗಿ ಸಿ ಎಸ್ ಐ ಟಾಮ್ಲಿಸನ್ ದೇವಾಲಯ ತಲುಪಿತು.
ಜಾಥಾ ಸಾಗಿದ ದಾರಿಯುದ್ದಕ್ಕೂ ಏಸು ಕ್ರಿಸ್ತನು ಈ ಲೋಕಕ್ಕೆ ಬಂದಂತಹ ಸನ್ನಿವೇಶಗಳನ್ನು ಹಾಡು, ಸಂದೇಶ ಹಾಗೂ ಕಿರು ನಾಟಕಗಳ ಮೂಲಕ ಬಿತ್ತರಿಸಿ ಜನ ಸಮುದಾಯಕ್ಕೆ ತಿಳಿಯ ಪಡಿಸಲಾಯಿತು.
ಎಂಡ್ ಟೈಮ್ ರಿವವೈಲ್ ಹಾರ್ವೆಷ್ಟು ಮಿನಿಷ್ರೀಸ್ ಮೂಲಕ ಜೋಸೆಫ್ ಕ್ವಿಂಟನ್ ರವರು ಏರ್ಪಡಿಸಿದ್ದ ಈ ಜಾಥಾ ಕಾರ್ಯಕ್ರಮ ಯುಸಿಡಬ್ಲ್ಯುಎನ್ ಸಹಯೋಗದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಮುಖಂಡರಾದ ಸಂಜೀವ ಕುಮಾರ್ ಸೇರಿದಂತೆ ನೂರಾರು ಮಂದಿ ಸ್ಥಳೀಯ ಕ್ರೈಸ್ತ ಮುಖಂಡರು ಭಾಗವಹಿಸಿದ್ದರು.
Comments are closed.