ಕುಣಿಗಲ್: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ಪುರ ಪ್ರವೇಶ ಕಾರ್ಯಕ್ರಮ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪ್ರಖಂಡ ವತಿಯಿಂದ ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಗುರುವಾರ ಸಂಜೆ ಸ್ವಾಗತಿಸಿ ಪಟ್ಟಣದ ಪ್ರಮುಖಬೀದಿಗಳಲ್ಲಿ ಶ್ರೀರಾಮ ಉತ್ಸವಮೂರ್ತಿಯೊಂದಿಗೆ ಮೆರವಣಿಗೆ ನಡೆಸಲಾಯಿತು.
ಪ್ರಖಂಡದ ಪ್ರಮುಖ ಕಾರ್ತೀಕ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ದೇಶ ಸೇರಿದಂತೆ ಪ್ರಪಂಚದಾದ್ಯಂತ ಹಿಂದೂಗಳಿಗೆ ಸಂತಸ ದಾಯಕ ವಿಷಯವಾಗಿದೆ, ಪವಿತ್ರ ಮಂತ್ರಾಕ್ಷತೆ ಪ್ರತಿಯೊಬ್ಬರ ಮನೆಗೂ ತಲುಪಿಸಿ ಶ್ರೀರಾಮಚಂದ್ರ ಆಶೀರ್ವಾದ, ಕೃಪೆ ಇರಲೆಂದು ಹಾರೈಸುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಶಗೌಡ, ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮನ ಭವ್ಯವಾದ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು ದೇಶದ ಎಲ್ಲಾ ಜನರಿಗೂ ಶ್ರೀರಾಮಚಂದ್ರರ ಆದರ್ಶದ ಬಗ್ಗೆ ತಿಳಿಹೇಳುವ ಸಂದರ್ಭವಾಗಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಜಗದೀಶ್, ಶ್ರೀರಾಮಚಂದ್ರ ಪ್ರಭು ಎಲ್ಲರಿಗೂ ದೇವರೆ, ಈ ವಿಷಯದಲ್ಲಿ ಕ್ಷುಲಕ ರಾಜಕಾರಣ ಸರಿಯಲ್ಲ, ದೇವರ ವಿಷಯದಲ್ಲಿ ರಾಜಕಾರಣ ಮಾಡುವುದು ಶೋಭೆ ತರವುದಿಲ್ಲ ಎಂದರು.
ಬಿಜೆಪಿ ಮುಖಂಡ ಹರ್ಷವರ್ಧನ ಗೌಡ, ವೆಂಕಟೇಶ್ವರ ಭಜನಾ ಮಂಡಳಿ, ಶ್ರೀವಾರಿ ಭಜನಾ ಮಂಡಳಿ, ವಿಷ್ಣು ಭಜನಾ ಮಂಡಳಿ ಸದಸ್ಯರು, ಪ್ರಮುಖರಾದ ಗಿರೀಶ್, ಮನೋಹರ್ ಸತೀಶ್, ರವೀಶ್, ಕೆ.ಕೆ.ರಮೇಶ್, ಮಂಜುನಾಥ, ರಂಗನಾಥ, ಅರುಣ, ಗೋಪಿ, ಕೃಷ್ಣೇಗೌಡ, ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ, ಶ್ರೀನಿವಾಸ, ರಾಮಚಂದ್ರ ಶ್ರೇಷ್ಠಿ, ರಮೇಶ್ ಇತರರು ಇದ್ದರು.
Comments are closed.