ಗಣಿತ ಶಾಸ್ತ್ರವು ಬದುಕಿನ ಅವಿಭಾಜ್ಯ ಅಂಗ: ಕೆ.ಬಿ.ಜಯಣ್ಣ

65

Get real time updates directly on you device, subscribe now.


ತುಮಕೂರು: ಗಣಿತದ ಹೊರತಾಗಿ ನಮ್ಮ ಬದುಕಿನಲ್ಲಿ ಏನೂ ಇರುವುದಕ್ಕೆ ಸಾಧ್ಯವಿಲ್ಲ, ನಮ್ಮನ್ನು ಆವರಿಸಿರುವ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಗಣಿತ ಒಳಗೊಂಡಿರುತ್ತದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ ಹೇಳಿದರು.

ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಪ್ರಪಂಚದ ಗಣಿತಶಾಸ್ತ್ರಕ್ಕೆ ನಮ್ಮ ದೇಶದ ಅತ್ಯದ್ಭುತ ಕೊಡುಗೆ, ಅವರ ಬಾಳಿದ ಪ್ರತಿಯೊಂದು ಕ್ಷಣವನ್ನೂ ಅವರು ಅತ್ಯಮೂಲ್ಯವನ್ನಾಗಿಸಿದವರು, ಯಾರೂ ಪರೀಕ್ಷಿಸಲಾಗದ, ಅರ್ಥ ಮಾಡಿಕೊಳ್ಳಲಾಗದಷ್ಟು ಎತ್ತರದ ಪ್ರತಿಭೆ ಅವರದು, ಅಂತಹ ವ್ಯಕ್ತಿತ್ವಗಳು ನಮಗೆ ನಿಜವಾದ ಮಾದರಿ, ಅವರ ಜನ್ಮ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸುತ್ತಿರುವುದು ನಮ್ಮ ಸುಯೋಗ ಎಂದರು.

ಅತಿಥಿಗಳಾಗಿದ್ದ ಹಿರಿಯ ಉಪನ್ಯಾಸಕ ವಾಸುದೇವ ಮೂರ್ತಿ ಮಾತನಾಡಿ, ಅಧ್ಯಯನದಲ್ಲಿ ಗಣಿತಕ್ಕೆ ಇರುವ ಸ್ಥಾನಮಾನ ಬಹಳ ದೊಡ್ಡದು, ಶ್ಲೋಕಗಳಲ್ಲಿ ಹೇಳಿರುವಂತೆ ನವಿಲಿಗೆ ತನ್ನ ಗರಿಗಳು, ನಾಗರ ಹಾವಿಗೆ ಹೆಡೆಯ ಮಣಿ ಶೋಭೆಯೋ ಅದೇರೀತಿ ಗಣಿತವೂ ಎಲ್ಲ ವಿಷಯಗಳಿಗೂ ಶೋಭೆ ತರುವಂಥದ್ದು, ಗಣಿತದ ಅಧ್ಯಯನ ನಮ್ಮ ಮಿದುಳನ್ನು ಹೆಚ್ಚು ಚುರುಕಾಗಿಸುತ್ತದೆ, ಕಷ್ಟವೆಂದು ಕಡೆ ಗಣಿಸದೇ ಇಷ್ಟ ಪಟ್ಟು ಅಧ್ಯಯನ ಮಾಡಿದರೆ ಗಣಿತವನ್ನು ನಮ್ಮದಾಗಿಸಿ ಕೊಳ್ಳಬಹುದು ಎಂದರು.

ವಿದ್ಯಾನಿಧಿ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರಸ್ವಾಮಿ.ಎಸ್.ಆರ್. ಮತ್ತು ಸಂಯೋಜಕ ದಯಾನಂದ್, ಗಣಿತ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Get real time updates directly on you device, subscribe now.

Comments are closed.

error: Content is protected !!