ತುಮಕೂರು: ಮುಂದಿನ 2024ನೇ ಜನವರಿ 09 ರಿಂದ 13ರ ವರೆಗೆ ಗೋವಾದ ಪಣಜಿಯಲ್ಲಿ ನಡೆಯುವ 22ನೇ ರಾಷ್ಟ್ರೀಯ ಪ್ಯಾರಾ ಒಲಂಪಿಕ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕರ್ನಾಟಕ ತಂಡ ಆಯ್ಕೆ ಮಾಡುವ ನಿಟ್ಟಿನಲ್ಲಿ ಶುಕ್ರವಾರ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಗಣದಲ್ಲಿ ಅಂಗವಿಕಲರ ಕ್ರೀಡಾಕೂಟದ ಆಯ್ಕೆ ಟ್ರಯಲ್ ನಡೆಯಿತುಮ ವಿಶೇಷ ಚೇತನ ಕ್ರೀಡಾಪಟುಗಳು ಓಟ ಸ್ಪರ್ಧೆಯಲ್ಲಿ ಟ್ರಾಕ್ ನಲ್ಲಿ ಮಿಂಚು ಹರಿಸಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಹಾಗೂ ತುಮಕೂರು ಜಿಲ್ಲಾ ಅಂಗವಿಕಲರ ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಆಯ್ಕೆ ಟ್ರಯಲ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 400ಕ್ಕೂ ಹೆಚ್ಚು ಅಂಗವಿಕಲ ಕ್ರೀಡಾಪಟುಗಳು ಭಾಗವಹಿಸಿದ್ದರು, ಅಂಗವಿಕಲರ ರಾಷ್ಟ್ರೀಯ ಆಯ್ಕೆ ಟ್ರಯಲ್ ಗೆ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಹಾಗೂ ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ.ವೆಂಕಟೇಶ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಗೋವಾದ ಪಣಜಿಯಲ್ಲಿ ಜನವರಿ 09 ರಿಂದ 13ರ ವರೆಗೆ ನಡೆಯುವ 22ನೇ ಪ್ಯಾರಾ ಒಲಂಪಿಕ್ ಅಥ್ಲೆಟಿಕ್ ಚಾಂಪಿಯನ್ ಶಿಪ್ 2023- 24ಕ್ಕೆ ಕರ್ನಾಟಕ ತಂಡವನ್ನು ಆಯ್ಕೆ ಮಾಡುವ ಸಂಬಂಧ ಟ್ರಯಲ್ ನಡೆಯುತ್ತಿದೆ, ಸುಮಾರು 28 ವಿವಿಧ ಅಂಗವೈಕಲ್ಯ ಹೊಂದಿರುವ ವಿಭಾಗಗಳಲ್ಲಿ ಕ್ರೀಡಾಪಟುಗಳು ಆಯ್ಕೆ ಬಯಸಿ ಬಂದಿದ್ದಾರೆ, ರಾಷ್ಟ್ರೀಯ ಪ್ಯಾರಾ ಒಲಂಪಿಕ್ ಕ್ರೀಡಾ ಸಂಸ್ಥೆ ನೀಡಿರುವ ಮಾನದಂಡದ ಅನ್ವಯ ಎಂಕ್ಯೂಎಸ್(ಮಿನಿಮಮ್ ಕ್ವಾಲಿಫಿಕೇಷನ್ ಸ್ಕೇಲ್) ನ ಅನ್ವಯ ನಿಗದಿ ಪಡಿಸಿರುವ ಗುರಿ ತಲುಪಿದವರನ್ನು ಕ್ರೀಡಾಕೂಟಕ್ಕೆ ಆಯ್ಕೆ ಮಾಡಬೇಕಿದೆ, ಹಾಗಾಗಿ ಟ್ರಯಲ್ ನಡೆಯಲಿದೆ, ನಾನು ಮೊದಲನೆಯದಾಗಿ ಗುರಿ ಮುಟ್ಟಿದ್ದೇನೆ ಎಂಬ ಕಾರಣಕ್ಕೆ ಆಯ್ಕೆ ಮಾಡಲು ಬರುವುದಿಲ್ಲ, ನಿಗದಿತ ಸಮಯದೊಳಗೆ ಇಂತಿಷ್ಟು ಮೀಟರ್ ಒಡಬೇಕೆಂಬ ನಿಯಮವಿದೆ, ಅದನ್ನು ಪೂರೈಸಿದವರವನ್ನು ಮಾತ್ರ ಆಯ್ಕೆ ಮಾಡಲಾಗುವುದು, ಓಟ, ಜಾವಲಿನ್, ಶಾಟ್ ಪುಟ್ ಸೇರಿದಂತೆ ಹಲವು ಕ್ರೀಡೆಗಳಿಗೆ ಆಯ್ಕೆ ಟ್ರಯಲ್ ಇದಾಗಿದೆ, ನುರಿತ ಕ್ರೀಡಾಧಿಕಾರಿಗಳು ಎಲ್ಲಾ ರೀತಿಯಿಂದಲೂ ಪರಿಶೀಲಿಸಿ ಅಂತಿಮ ಪಟ್ಟಿ ಸಿದ್ಧಪಡಿಸುತ್ತಾರೆ ಎಂದರು.
ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಹೇಶ್.ಎಂ.ಕೆ. ಮಾತನಾಡಿ, ಗೋವಾದ ಪಣಜಿಯಲ್ಲಿ ನಡೆಯುವ 22ನೇ ಪ್ಯಾರಾ ಒಲಂಪಿಕ್ ಚಾಂಪಿಯನ್ ಶಿಪ್ 2023-24 ಕ್ಕೆ ರಾಷ್ಟ್ರದಾದ್ಯಂತ ಬರುವ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಗೋವಾ ರಾಜ್ಯದ ಅಂಗವಿಕಲರ ಕ್ರೀಡಾ ಸಂಸ್ಥೆ ಮಾಡಿದೆ, ರೈಲಿನ ಪ್ರಯಾಣದ ದರವನ್ನು ಮಾತ್ರ ಕ್ರೀಡಾಪಟುಗಳು ಭರಿಸಬೇಕಾಗಿದೆ, ಇತ್ತೀಚೆಗೆ ನಡೆದ ಏಷ್ಯನ್ ಪ್ಯಾರಾ ಗೇಮ್, ಒಲಂಪಿಕ್ ಗೇಮ್ ಗಳಲ್ಲಿ ಭಾಗವಹಿಸಿ ಪದಕ ಪಡೆದ ಅಂಗವಿಕಲ ಕ್ರೀಡಾಪಟುಗಳಿಗೆ ಯಾವುದೇ ಆಯ್ಕೆ ಟ್ರಯಲ್ ಇಲ್ಲದೆ ನೇರವಾಗಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ, ಹೊಸದಾಗಿ ಕ್ರೀಡಾ ಕ್ಷೇತ್ರಕ್ಕೆ ಬರುವ ಅಂಗವಿಕಲ ಕ್ರೀಡಾಪಟುಗಳ ಆಯ್ಕೆ ಟ್ರಯಲ್ ನಲ್ಲಿ ಎಂಕ್ಯೂಎಸ್ ನಂತೆ ಆಯ್ಕೆಯಾಗುವುದು ಕಡ್ಡಾಯ ಎಂದರು.
ಈ ವೇಳೆ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಮಹದೇವ, ಸದಸ್ಯರಾದ ಜೆ.ಚಂದ್ರಶೇಖರ್, ಕೆ.ವೈ.ವೆಂಕಟೇಶ್, ಆರ್.ರಾಮಚಂದ್ರ, ಎಂ.ನೀಲಾಂಜನೆಯ್ಯ ಮತ್ತಿತರರು ಪಾಲ್ಗೊಂಡಿದ್ದರು.
Comments are closed.