ಮಧುಗಿರಿ: ಇತ್ತೀಚೆಗೆ ಗಡಿಭಾಗದಲ್ಲಿ ಕರಡಿ ಆಂಧ್ರ ಮೂಲದ ಮಹಿಳೆಯೊಬ್ಬಳ ಮೇಲೆ ದಾಳಿ ನಡೆಸಿದ್ದು ಸಹಕಾರ ಸಚಿವರ ಸೂಚನೆಯಂತೆ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅರಣ್ಯಾಧಿಕಾರಿಗಳು ದಾಖಲಿಸಿದ್ದಾರೆ.
ತಾಲೂಕಿನ ಮಿಡಿಗೇಶಿ ಹೋಬಳಿಯ ಬಿದರೆಕೆರೆಯ ಗಡಿಭಾಗದ ಸಮೀಪ ಕರಡಿ ಮಹಿಳೆಯ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು.
ಆಂಧ್ರ ಮೂಲದ ಲಕ್ಷ್ಮೀನರಸಮ್ಮ (30) ಗೋಂವಿದಪುರ ಗ್ರಾಮದವಳಾಗಿದ್ದು ಘಟನೆ ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ ನಡೆದಿತ್ತು, ಮಹಿಳೆಯು ಈ ಮೊದಲು ಹಿಂದೂಪುರದ ಸಾರ್ವಜನಿಕ ಆಸ್ಪತ್ರೆ ಹಾಗೂ ಅಲ್ಲಿಂದ ಕರ್ನೂಲ್ ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರೆ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲವೆಂದು ಮಹಿಳೆ ಹಾಗೂ ಆಕೆಯ ಪುತ್ರ ಆರೋಪಿಸಿದ್ದರು, ವಿಷಯ ತಿಳಿದ ಸಚಿವ ಕೆ.ಎನ್ ರಾಜಣ್ಣನವರು ತಾಲೂಕಿನ ಅರಣ್ಯಾಧಿಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿ ಗಾಯಗೊಂಡಿರುವ ಮಹಿಳೆಯನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸುವಂತೆ ಸೂಚಿಸಿ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಅರಣ್ಯಾಧಿಕಾರಿಗಳಾದ ಸುರೇಶ್.ಹೆಚ್.ಎಂ. ಹಾಗೂ ಮುತ್ತುರಾಜ್ ಅವರಿಗೆ ದೂರವಾಣಿ ಕರೆ ಮಾಡಿ ಮಹಿಳೆಯ ಆರೋಗ್ಯ ವಿಚಾರಿಸಿ ಮಾನವೀಯತೆ ಮೆರೆದಿದ್ದಾರೆ.
Comments are closed.