ತುಮಕೂರು: ಮಧ್ಯ ಪ್ರದೇಶದ ಭೂಪಾಲ್ ನ ತ್ಯಾಂತ ಟೋಪೆ ಸ್ಟೇಡಿಯಂನಲ್ಲಿ ಡಿಸೆಂಬರ್ 27 ರಿಂದ 01-01-2024ರ ವರೆಗೆ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆಯವ 67ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಚಾಂಪಿಯನ್ ಶಿಪ್ 2023-24ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾಗವಹಿಸಲು ತುಮಕೂರಿನ ನಿವೇಕಾನಂದ ಶೂಟಿಂಗ್ ಅಕಾಡೆಮಿಯ 16 ಸ್ಪರ್ಧಿಗಳು ಇಂದು ಭೂಪಾಲ್ ಪ್ರಯಾಣ ಬೆಳೆಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್, ನೇತಾಜಿ ಯುವಕ ಸಂಘದ ನೇತಾಜಿ ಶ್ರೀಧರ್, ವಿವೇಕಾನಂದ ಶೂಟಿಂಗ್ ಅಕಾಡೆಮಿಯ ಅನಿಲ್, ಕ್ರೀಡಾ ತರಬೇತುದಾರರ ಗುರುಪ್ರಸಾದ್ ಹಾಗೂ ಮಕ್ಕಳ ಪೋಷಕರು ಮಕ್ಕಳಿಗೆ ಶುಭ ಹಾರೈಸಿ ಬಿಳ್ಕೋಟ್ಟರು.
ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್, ಇತ್ತೀಚಿನ ದಿನಗಳಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್ ಅಕಾಡೆಮಿ, ಶೂಟಿಂಗ್ ಕ್ರೀಡೆಯಲ್ಲಿ ಒಂದರ ಮೇಲೊಂದು ಪದಕ ಗೆದ್ದು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತರುತ್ತಿದೆ, ಡಿಸೆಂಬರ್ 27 ರಿಂದ ಜನವರಿ 01ರ ವರೆಗೆ ನಡೆಯುವ ಸ್ಕೂಲ್ ಗೇಮ್ಸ್ ನಲ್ಲಿ ಜಿಲ್ಲೆಯ 16 ಕ್ರೀಡಾಪಟುಗಳು ಭಾಗವಹಿಸು ತಿದ್ದು, ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳನ್ನು ಗೆಲ್ಲುವ ಮೂಲಕ ಜಿಲ್ಲೆಯ, ರಾಜ್ಯದ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿ ಕಳುಹಿಸಿದ್ದೇವೆ, ಮಕ್ಕಳು ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಒಂದಿಲೊಂದು ಪದಕ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ದ ಶೂಟಿಂಗ್ ಅಕಾಡೆಮಿಯ ಅನಿಲ್ ಮಾತನಾಡಿ, ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ಟಿಟಿ ಸ್ಟೇಡಿಯಂನಲ್ಲಿ ನಡೆಯುವ ಎಸ್ ಜಿ ಎಫ್ ಐ ಕ್ರೀಡಾಕೂಟದ ಹೈಸ್ಕೂಲ್ ಮತ್ತು ಪಿಯುಸಿ ಕಲಿಯುತ್ತಿರುವ 14, 17 ಮತ್ತು 19 ವರ್ಷ ದೊಳಗಿನ ಮಕ್ಕಳ ವಿಭಾಗದಲ್ಲಿ ತುಮಕೂರಿನ 16 ಶೂಟಿಂಗ್ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ, ವಿವೇಕಾನಂದ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಗುರುಕುಲ ಶಾಲೆಯ ನಕುಲ್, ಪುನಿತ, ಮಹಾಲಕ್ಷ್ಮಿ, ಸೆಂಟ್ ಮೇರಿಸ್ ಶಾಲೆಯ ಸಾನಿಕ್ ಸುಲ್ತಾನ್, ಅನನ್ಯ, ಸರ್ವೋದಯ ಪಿಯು ಕಾಲೇಜಿನ ಕಲ್ಪಿತ್, ಭುವನ್, ತ್ರಿಷಾ, ವಿಜಿತ, ನಿತಿನ್, ಮಾರುತಿ ಇಂಟರ್ ನ್ಯಾಷನಲ್ ಶಾಲೆಯ ತನ್ಮಯ, ಸಾನಿಯ ತಾಜ್ ಹಾಗೂ ಚಿನ್ಮಯ ಅವರು 76ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಚಾಂಪಿಯನ್ ಶಿಪ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತಿದ್ದಾರೆ, ಅದೇ ರೀತಿ ದ್ಯಾವಪ್ಪನವರ- ವಳಸಂಗ ಎಜುಕೇಷನ್ ಅಂಡ್ ಅಕಾಡೆಮಿಕ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಚೇತನ ಪಬ್ಲಿಕ್ ಶಾಲೆಯ ಮಕ್ಕಳಾದ ಪೃಥ್ವಿರಾಜ್ ಬಾಲೆ ಹೊಸೂರು, ಕೀರ್ತಿ ಬಾಲೆ ಹೊಸೂರು ಹಾಗೂ ಸುಮ ಅವರ ಸಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಮಕ್ಕಳು ಹಲವು ತಿಂಗಳಿನಿಂದ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು ಪದಕ ಗೆಲ್ಲತ್ತಾರೆ ಎಂಬ ವಿಶ್ವಾಸವಿದೆ, ಅವರಿಗೆ ಶುಭ ಕೋರಿ ಬೀಳ್ಕೊಡಲಾಗಿದೆ ಎಂದರು.
Comments are closed.