ಅಂಚೆ ಇಲಾಖೆ ಹಣ ಲಪಟಾಯಿಸಿದ್ದ ಆರೋಪಿ ಅರೆಸ್ಟ್

34

Get real time updates directly on you device, subscribe now.


ತುಮಕೂರು: ಅಂಚೆ ಇಲಾಖೆಯ 5.20 ಲಕ್ಷ ರೂ. ಲಪಟಾಯಿಸಿ ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ತಲೆ ಮರೆಸಿಕೊಂಡಿದ್ದ ಅಂಚೆ ಇಲಾಖೆಯ ನೌಕರನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ, ಜಿಲ್ಲೆಯ ಪಾವಗಡ ತಾಲ್ಲೂಕು ನ್ಯಾಯದ ಗುಂಟೆ ಉಪ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುಂಗಾರ ವಂಸಿ ಕೃಷ್ಣ (28) ಬಂಧಿತ ಆರೋಪಿ, ಈತ ಮೂಲತಃ ಸಂಜೆಪಲ್ಲಿ, ರಾಯಚೋಟಿ ತಾಲ್ಲೂಕು, ಕಡಪಾ ಜಿಲ್ಲೆ, ಆಂಧ್ರಪ್ರದೇಶದವನಾಗಿದ್ದು, ಪಾವಗಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.

ಪ್ರಕರಣದ ಹಿನ್ನೆಲೆ: ಬಂಧಿತನು ದಿನಾಂಕ 11-07-2019 ರಿಂದ 26- 08-2019 ರ ವರೆಗೆ ಅಂಚೆ ಕಚೇರಿಯಿಂದ ತನಗೆ ನೀಡಿದ್ದ ಅಧಿಕಾರ ಹಾಗೂ OTP IPPB (Indian Post Payment Bank) ದುರ್ಬಳಕೆ ಮಾಡಿಕೊಂಡು ಖಾತೆಗಳ ಮೂಲಕ 5,28,000 ರೂ. ಗಳನ್ನು ಕಾಲ್ಪನಿಕ ರೀತಿಯಲ್ಲಿ ಅಂಚೆ ಕಚೇರಿಯ ಗ್ರಾಹಕರ ಖಾತೆಗಳಿಗೆ ವರ್ಗಾಯಿಸಿ, ನಂತರ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಅಂಚೆ ಕಚೇರಿಯ 5,28,000 ರೂ. ಗಳನ್ನು ದುರ್ಬಳಕೆ ಮಾಡಿಕೊಂಡಿದ್ದನು, ಕೃತ್ಯದ ಬಳಿಕ ದಿನಾಂಕ : 27-08-2019 ರಿಂದ ಅನಧಿಕೃತವಾಗಿ ಗೈರು ಹಾಜರಾಗಿ ತಲೆ ಮರೆಸಿಕೊಂಡಿದ್ದನು, ಈ ಬಗ್ಗೆ ಶಿರಾ ಅಂಚೆ ಉಪ ವಿಭಾಗದ ಅಂಚೆ ನಿರೀಕ್ಷಕಿ ಸ್ವಾತಿ ಅವರು ದಿ: 27-07- 2021 ರಂದು ಅರಸೀಕೆರೆ ಠಾಣೆಗೆ ದೂರು ನೀಡಿದ್ದರು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಇಎನ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದರು.
ಪ್ರಕರಣ ಗಮಭೀರವಾಗಿ ಪರಿಗಣಿಸಿದ ಎಸ್ ಪಿ ಅಶೋಕ್ ವೆಂಕಟ್ ಅವರು, ಕಳೆದ ನಾಲ್ಕು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿಯಲು ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು, ತನಿಖೆ ನಡೆಸಿದ ಪೊಲೀಸರು 22-12-2023 ರಂದು ಪ್ರಕರಣದಲ್ಲಿನ ಆರೋಪಿ ಮುಂಗಾರ ವಂಸಿ ಕೃಷ್ಣ ಬಿನ್ ಎಂ.ರಾಜೇಶ್ ನನ್ನು (28) ಬಂಧಿಸಿ ಪಾವಗಡದ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದುಬೈಗೆ ಓಡಿ ಹೋಗಿದ್ದ: ಆರೋಪಿ ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಳ್ಳುವ ಉದ್ದೇಶದಿಂದ ದುಬೈಗೆ ಹೋಗಿ ನೆಲೆಸಿದ್ದ, ಆದರೆ ಜಿಲ್ಲೆಯ ಪೊಲೀಸರು ಆತನ ಚಲನ ವಲನದ ಮೇಲೆ ನಿರಂತರವಾಗಿ ನಿಗಾ ವಹಿಸಿ ನಾಲ್ಕು ವರ್ಷಗಳ ಬಳಿಕ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾಮಕೃಷ್ಣಯ್ಯ. ಸಿ.ಹೆಚ್ ಹಾಗೂ ಸಿಬ್ಬಂದಿ ಶಾಂತಕುಮಾರ್, ಮಾರುತಿ, ಹರೀಶ್, ಅನಿಲ್ ಕುಮಾರ್, ಚಾಲಕರಾದ ಚಿಕ್ಕಣ್ಣ ಅವರ ಕಾರ್ಯವನ್ನು ಎಸ್ ಪಿ ಅಶೋಕ್ ವೆಂಕಟ್ ಶ್ಲಾಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!