ಗುಬ್ಬಿ: ನಗರವನ್ನು ಸ್ವಚ್ಛವಾಗಿಡಬೇಕು ಎಂದರೆ ಎಲ್ಲರ ಸಹಕಾರ ಮುಖ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣ ಪಂಚಾಯಿತಿ ವತಿಯಿಂದ ಹಸಿ ಕಸ ಮತ್ತು ಒಣ ಕಸಕ್ಕೆ ಟ್ರ್ಯಾಕ್ಟರ್ ಜೆಸಿಬಿ ಹಾಗೂ ನೂತನ ಆಟೋಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು ಈಗಾಗಲೇ ಪ್ರತಿ ಮನೆಗೂ ಎರಡೆರಡು ಬಕೆಟ್ ನೀಡಲಾಗಿದ್ದು ನಮ್ಮ ಆಟೋ ಹಾಗೂ ಟ್ರಾಕ್ಟರ್ ಬಂದಾಗ ಮನೆಯ ಮಾಲೀಕರು ಅಂಗಡಿ ಮಾಲೀಕರು ಕಸವನ್ನು ಅದಕ್ಕೆ ನೀಡಬೇಕು, ಇದರಿಂದ ನಮ್ಮ ಪಟ್ಟಣವನ್ನು ಸ್ವಚ್ಛವಾಗಿಡಬಹುದು, ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಯಾವುದೇ ರೀತಿಯ ಸಮಸ್ಯೆ ಆಗದಂತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿ ನೈಸರ್ಗಿಕವಾಗಿ ಬಳಸುವಂತಹ ವಸ್ತುಗಳನ್ನ ಸಾರ್ವಜನಿಕರು ನಾಗರಿಕರು ಹೆಚ್ಚಿನದಾಗಿ ಬಳಸಿಕೊಳ್ಳಿ ಸ್ಪಷ್ಟವಾಗಿರುವುದು, ಕೇವಲ ಅಧಿಕಾರಿಗಳ ಕರ್ತವ್ಯ ಮಾತ್ರವಲ್ಲದೆ ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಿದಾಗ ಖಂಡಿತವಾಗಿ ಪಟ್ಟಣ ಸ್ವಚ್ಛವಾಗಿಡಬಹುದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಡೆಸಲು ನ್ಯಾಯಾಲಯದಲ್ಲಿ ಮೀಸಲಾತಿಯ ಪ್ರಕರಣ ಇರುವುದರಿಂದ ತಡವಾಗುತ್ತಿದ್ದು ಅದನ್ನು ಕೂಡ ಶೀಘ್ರವಾಗಿ ಸರಕಾರ ಬಗೆಹರಿಸಿ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ, ನಾಡ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಂಪ್ಯೂಟರ್ ಆಪರೇಟರ್ ಗಳಿಗೆ ಒಂದು ವರ್ಷದಿಂದ ಗೌರವ ಧನ ನೀಡಿಲ್ಲ ಎಂಬ ವಿಷಯ ತಿಳಿದಿದ್ದು ರಾಜ್ಯ ಮಟ್ಟದಲ್ಲಿ ಸಭೆ ಕರೆದಿದ್ದು ಅವರ ಸಮಸ್ಯೆ ಶೀಘ್ರದಲ್ಲಿಯ ಬಗೆಹರಿಸಲಾಗುತ್ತದೆ, ಯಾವುದೇ ರೀತಿಯ ಕೆಟ್ಟ ನಿರ್ಧಾರಕ್ಕೆ ಯಾರು ಬರಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಆರತಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುಳಾ ದೇವಿ ಸೇರಿದಂತೆ ಪಟ್ಟಣ ಪಂಚಾಯತಿ ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗ ಹಾಜರಿದ್ದರು.
Comments are closed.