ವಿದ್ಯಾರ್ಥಿಗಳು ಸಂವಹನ ಕೌಶಲ್ಯ ಕರಗತ ಮಾಡಿಕೊಳ್ಳಲಿ

53

Get real time updates directly on you device, subscribe now.


ತುಮಕೂರು: ಸಿದ್ಧೇಶ್ವರ ಸ್ವಾಮೀಜಿ ಹೇಳುವ ಹಾಗೆ ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾಗಬಹುದು, ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗಲಾರ, ಈ ಸಾಲುಗಳು ವ್ಯಕ್ತಿತ್ವ ಬದಲಾವಣೆಯ ಮೆಟ್ಟಿಲಾಗಬೇಕು ಎಂದು ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದರಾಮಣ್ಣ ತಿಳಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗ ಆಯೋಜಿಸಿದ್ದ ಬೆಳಕಿನೆಡೆಗೆ ಒಂದು ಪಯಣ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಸಮಯ ಎನ್ನುವುದು ಅಮೂಲ್ಯವಾದದ್ದು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಬಾರದು, ಸಮಾಜ ಕಾರ್ಯ ವಿದ್ಯಾರ್ಥಿಗಳು ಮುಖ್ಯವಾಗಿ ಸಂವಹನ ಕೌಶಲ್ಯ ಕರಗತ ಮಾಡಿಕೊಳ್ಳಬೇಕು, ಹವ್ಯಾಸಗಳು ಬದಲಾದರೆ ವ್ಯಕ್ತಿತ್ವ ಉತ್ತಮಗೊಳ್ಳುತ್ತದೆ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಇಂತಹ ಪ್ರತಿಯೊಬ್ಬ ಸಾಧಕರು ಸೋಲಿನ ನಂತರ ಯಶಸ್ಸು ಕಂಡವರು, ಹಾಗೆಯೇ ವಿದ್ಯಾರ್ಥಿಗಳು ಸೋಲನ್ನು ದಾಟಿ ಗೆಲುವಿನತ್ತ ಸಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವ ವಿದ್ಯಾಲಯದ ಸಿಂಡಿಕೆಟ್ ಸದಸ್ಯ ದೇವರಾಜು ಮಾತನಾಡಿ, ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಮಾಜ ಕಾರ್ಯ ಅಧ್ಯಯನವು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ, ಸಮಾಜ ಕಾರ್ಯ ವಿದ್ಯಾರ್ಥಿಗಳು ಸಮಾಜದಲ್ಲಿ ಬೆರೆತು, ಸಮಾಜದ ಜೊತೆಗೆ ಕೆಲಸ ಮಾಡಬೇಕಿದೆ ಎಂದರು.

ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ್.ಬಿ, ಪ್ರೊ.ಪರುಶುರಾಮ.ಕೆ.ಜಿ, ಉಪನ್ಯಾಸಕರಾದ ಸಂತೋಷ್ ಕುಮಾರ್.ಎಸ್. ಎಚ್, ಡಾ.ಭೂಷಣ್ ಕುಮಾರ್.ಸಿ.ಎ, ಡಾ.ಲಕ್ಷೀರಂಗಯ್ಯ.ಕೆ.ಎಚ್, ಡಾ.ನಿಸರ್ಗ ಪ್ರಿಯ, ಅನುಷಾ ಜೈನ್.ಎಚ್.ಡಿ, ಕೃಷ್ಣ ತಲ್ವಾರ್ ಇದ್ದರು.

Get real time updates directly on you device, subscribe now.

Comments are closed.

error: Content is protected !!