ಪರಿಶ್ರಮದಿಂದ ಉತ್ತಮ ಜೀವನ ಸಾಧ್ಯ

41

Get real time updates directly on you device, subscribe now.


ಕುಣಿಗಲ್: ಯುವ ವಿದ್ಯಾರ್ಥಿಗಳು ಜೀವನ ಅಸಂಖ್ಯಾತ ಅವಕಾಶಗಳ ಗಣಿ ಎಂದರಿತು ನಿತ್ಯ ಅಧ್ಯಯನ ಶೀಲರಾಗಿ ಕಠಿಣ ಪರಿಶ್ರಮದಿಂದ ಮುನ್ನಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಯಾ ಸಾರಂಗ ಪಾಣಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದಿಂದ ಪ್ರಥಮ ಎಂಕಾಂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರ ಕಲ್ಪಿಸಿದ ಸವಲತ್ತು ಸದ್ಬಳಕೆ ಮಾಡಿಕೊಳ್ಳಬೇಕು, ಉನ್ನತ ಶಿಕ್ಷಣವನ್ನು ಗ್ರಾಮೀಣರ ಮನೆ ಬಾಗಿಲಿಗೆ ಸರ್ಕಾರಿ ಕಾಲೇಜುಗಳ ಮುಖಾಂತರ ನೀಡುತ್ತಿದ್ದು, ಹೆಚ್ಚೆಚ್ಚು ವಿದ್ಯಾರ್ಥಿಗಳು ಪದವಿ ನಂತರ ಉನ್ನತ ಶಿಕ್ಷಣ ಪಡೆಯುವ ಕನಸನ್ನು ನನಸು ಮಾಡಿಕೊಳ್ಳಬೇಕು, ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಕಲಿಕೆ, ಸಂವಹನ ಮತ್ತಿತರ ಮೃದು ಕೌಶಲ್ಯ ಕಲಿತು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಎನ್.ನರಸಿಂಹ ಮೂರ್ತಿ, ನಾವು ಬಾಹ್ಯವಾಗಿ ಹೊಂದಿರುವ ಚಿರಾಸ್ತಿಗಳನ್ನು ಯಾರಾದರೂ ಕದಿಯಬಹುದು, ಆದರೆ ನಾವು ಗಳಿಸಿದ ಜ್ಞಾನವನ್ನು ಯಾರೂ ಕದಿಯಲು ಸಾಧ್ಯವಿಲ್ಲ, ಆದುದರಿಂದ ಯುವ ಜನರು ಜ್ಞಾನವೇ ಸಂಪತ್ತು ಎಂಬುದನ್ನು ಮರೆಯಬಾರದು, ದೈಹಿಕ ಹಸಿವಿನಂತೆ ನಿರಂತರವಾಗಿ ಜ್ಞಾನದ ಹಸಿವು ಹೊಂದಬೇಕಿದೆ ಎಂದರು.
ಐಕ್ಯೂಎಸಿ ಸಂಚಾಲಕ ಡಾ.ಜೆ.ಶಿವಕುಮಾರ್, ಅಧ್ಯಾಪಕರಾದ ನಾರಾಯಣ ದಾಸ್, ಡಾ.ಗಿರಿಜಾಂಬ, ಡಾ.ರಾಧಾಕೃಷ್ಣ, ಮೈಲಾರಯ್ಯ, ಡಾ.ಎನ್.ಟಿ.ಶ್ರೀನಿವಾಸ್, ಹನುಮಂತಪ್ಪ, ಡಾ.ಮಮತ, ಗಂಗಾಧರ, ಬೊಮ್ಮನಹಾಳ್ ಸುರೇಶ್, ರೇವಣ್ಣಸಿದ್ದೇಶ್ವರ, ನಾಗಮ್ಮ ರುಕ್ಮಿಣಿ, ಶ್ರೀನಿವಾಸ ಪ್ರಭು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!