ನಾಮ ಫಲಕದಲ್ಲಿ ಕನ್ನಡ ಬರೆಸಿ- ಕರಪತ್ರ ಹಂಚಿ ಮನವಿ

74

Get real time updates directly on you device, subscribe now.


ತುಮಕೂರು: ಕರ್ನಾಟಕ ಸರಕಾರ ಜಾರಿಗೆ ತಂದಿರುವ ಕರ್ನಾಟಕ ರಾಜ್ಯ ಶಾಫ್ ಅಂಡ್ ಎಸ್ಟಾಬಿಷ್ಮೆಂಟ್ ಕಾಯ್ದೆ 1963ರ ಕಲಂ 2 ಎ ಅನ್ನು ನಗರದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳು ಅನುಸರಿಸುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ನಗರದ ಎಂ.ಜಿ.ರಸ್ತೆಯ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಕರಪತ್ರ ಹಂಚುವ ಮೂಲಕ ಒತ್ತಾಯಿಸಲಾಯಿತು.

ಕರುನಾಡ ವಿಜಯಸೇನೆಯ ಹತ್ತಾರು ಕಾರ್ಯಕರ್ತರು ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ಅವರ ನೇತೃತ್ವದಲ್ಲಿ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಎಂ.ಜಿ.ರಸ್ತೆ, ಕೆ.ಆರ್.ಬಡಾವಣೆ, ವಿವೇಕಾನಂದ ರಸ್ತೆ, ಹೊರಪೇಟೆ ಮುಖ್ಯ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳ ಬಳಿ ತೆರಳಿ ಸರಕಾರದ ನಿಯಮದಂತೆ ಕರ್ನಾಟಕದಲ್ಲಿ ಅಂಗಡಿ ತೆರೆದು ವ್ಯಾಪಾರ ಮಾಡುವ ಅಂಗಡಿಗಳ ಮಾಲೀಕರು ಕರ್ನಾಟಕ ರಾಜ್ಯ ಶಾಫ್ಸ್ ಅಂಡ್ ಎಷ್ಟಾಬ್ಲಿಷ್ ಮೆಂಟ್ ಆಕ್ಟ್ 1963 ಕಲಂ 2ಎ ಅನ್ವಯ ತಮ್ಮ ಅಂಗಡಿ ನಾಮ ಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು, 60:40ರ ಅನುಪಾತದಲ್ಲಿ ಕನ್ನಡ ನಾಮಫಲಕ ಶೇ.60 ರಷ್ಟು ದೊಡ್ಡದಾಗಿದ್ದು, ಉಳಿದ ಭಾಷೆಯ ನಾಮಫಲಕ ಶೇ.40 ರಷ್ಟಿರಬೇಕು ಎಂಬ ನಿಯಮ ರೂಪಿಸಿದೆ, ಇದರ ಅಧಿಸೂಚನೆ ಹೊರಡಿಸಿದೆ, ಒಂದು ವೇಳೆ ಈ ನಿಯಮ ಪಾಲಿಸದಿದ್ದರೆ ಸ್ಥಳೀಯ ಆಡಳಿತ ಅಂತಹ ಅಂಗಡಿ ಮುಂಗಟ್ಟುಗಳಿಗೆ ನೋಟಿಸ್ ನೀಡಿ ನಿಗದಿತ ಅವಧಿಯೊಳಗೆ ಪಾಲಿಸದೇ ಇದ್ದಲ್ಲಿ ದಂಡ ವಿಧಿಸುವ ಅವಕಾಶವಿದೆ, ಆದರೆ ಇದುವರೆಗೂ ತುಮಕೂರು ನಗರದಲ್ಲಿ ಜಾರಿಯಾಗದ ಹಿನ್ನೆಲೆಯಲ್ಲಿ ಕರಪತ್ರ ವಿತರಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ಅರುಣ್ ಕೃಷ್ಣಯ್ಯ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!