ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮುನ್ನ ಯೋಚಿಸಿ

57

Get real time updates directly on you device, subscribe now.


ತುಮಕೂರು: ಷೇರು ಮಾರುಕಟ್ಟೆಯಲ್ಲಿ ಅಪಾಯ ಹೆಚ್ಚಾಗಿರುತ್ತದೆ, ಹಣ ಅಥವಾ ಷೇರ್ ಗಳನ್ನು ಹೂಡಿಕೆ ಮಾಡುವ ಮೊದಲು ಅದರ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಬೇಕು, ತಾರ್ಕಿಕವಾಗಿ ಯೋಚಿಸಿ ನಂತರ ಹೂಡಿಕೆ ಮಾಡಬೇಕು ಎಂದು ನೋವೈಸ್ ಲರ್ನಿಂಗ್ ಅಕಾಡೆಮಿಯ ನಿರ್ದೇಶಕ ಸಿ.ಎಸ್.ಕಾರ್ತಿಕ್ ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯವು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಬಹುದು, ಹಣ ನಿರ್ವಹಣೆಯ ಬಗ್ಗೆ ಜ್ಞಾನವಿರಬೇಕು, ಮಾರುಕಟ್ಟೆಯ ಆಳ- ಅಗಲ ತಿಳಿದಿರಬೇಕು, ದೀರ್ಘಾವಧಿ, ಅಲ್ಪಾವಧಿಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬಹುದು, ಅದಕ್ಕೂ ಮುನ್ನ ಈ ವೃತ್ತಿಯಲ್ಲಿ ಪರಿಣತಿ ಹೊಂದಿರುವ ಹಣ ನಿರ್ವಹಣಾ ವ್ಯವಸ್ಥಾಪಕರನ್ನು ಭೇಟಿ ಮಾಡಿ ಅಥವಾ ಸಲಹೆ ಪಡೆಯಿರಿ ಎಂದು ಹೇಳಿದರು.

ವಿವಿಯ ಉದ್ಯೋಗಾಧಿಕಾರಿ ಪ್ರೊ.ಕೆ.ಜಿ.ಪರಶುರಾಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಜಿ.ಬಸವರಾಜ, ಎಂಕಾಂ (ಮಾಹಿತಿ ವ್ಯವಸ್ಥೆ) ವಿಭಾಗದ ಮುಖ್ಯಸ್ಥ ಡಾ.ಎಸ್.ದೇವರಾಜಪ್ಪ, ನ್ಯಾಷನಲ್ ಸ್ಟಾಕ್ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ನ ಮ್ಯಾನೇಜ್ಮೆಂಟ್ ಟ್ರೈನಿ ಕಿರಣ್ ಡೇವಿಡ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!