ಗಲಾಟೆ ತಪ್ಪಿಸಿದ ಪೊಲೀಸರು

75

Get real time updates directly on you device, subscribe now.


ಕುಣಿಗಲ್: ಪಟ್ಟಣದ ಮಹಾತ್ಮ ಗಾಂಧಿ ಪ.ಪೂ. ಕಾಲೇಜಿನಲ್ಲಿ ವಾರ್ಷಿಕ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರು, ಉಪನ್ಯಾಸಕರು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ ಪೊಲೀಸರ ರಕ್ಷಣೆಯಲ್ಲಿ ಕಾರ್ಯಕ್ರಮ ನಡೆಯುವಂತಾದ ಘಟನೆ ನಡೆದಿದೆ.

ಪಟ್ಟಣದ ಮಹಾತ್ಮಗಾಂಧಿ ಪ.ಪೂ. ಕಾಲೇಜಿನಲ್ಲಿ ಕಾಲೇಜು ವಾರ್ಷಿಕ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ವೀಕ್ಷಿಸಲು ಹೊರಗಿನಿಂದ ಕೆಲ ಪ್ರೇಕ್ಷಕರು ಆಗಮಿಸಿದ್ದರು, ಈವೇಳೆ ಉಪನ್ಯಾಸಕರು ಕೆಲ ಪ್ರೇಕ್ಷಕರ ವರ್ತನೆ ಬಗ್ಗೆ ಆಕ್ಷೇಪಿಸಿದಾಗ ಪ್ರೇಕ್ಷಕರು ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸಿ ಕೈಕೈ ಮಿಲಾಯಿಸಲು ಮುಂದಾದರು ಎನ್ನಲಾಗಿದೆ. ಉಪನ್ಯಾಸಕರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ ಪ್ರೇಕ್ಷಕರ ಕ್ರಮ ಖಂಡಿಸಿ ವಿದ್ಯಾರ್ಥಿಗಳು ವಾಗ್ವಾದಕ್ಕೆ ಇಳಿದಾಗ ಗೊಂದಲದ ವಾತಾವರಣ ಉಂಟಾಯಿತು, ಠಾಣೆಗೆ ಕೆಲವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಕಾಲೇಜು ಮುಂಭಾಗದ ರಸ್ತೆಯಲ್ಲಿ ಹಾಗೂ ಕಾಲೇಜು ಆವರಣದಲ್ಲಿ ಅನಗತ್ಯವಾಗಿ ನಿಂತಿದ್ದ ಪ್ರೇಕ್ಷಕರ ಚದುರಿಸಿ, ಗೇಟ್ ಮುಚ್ಚಿ ಪೊಲೀಸ್ ರಕ್ಷಣೆಯಲ್ಲಿ ಕಾರ್ಯಕ್ರಮ ನಡೆಯುವಂತಾಯಿತು.

Get real time updates directly on you device, subscribe now.

Comments are closed.

error: Content is protected !!