ಅಪರಿಚಿತ ವಾಹನ ಡಿಕ್ಕಿ- ಜಿಂಕೆ ಸಾವು

65

Get real time updates directly on you device, subscribe now.


ಮಧುಗಿರಿ: ತಾಲೂಕಿನ ಕೊಡುಗೆನಹಳ್ಳಿ ಹೋಬಳಿಯ ಕಲಿದೇವಪುರ ಗ್ರಾಮ ಪಂಚಾಯಿತಿಗೆ ಸೇರಿದ ಶಾನ್ ಸಿಟಿ ಸಮೀಪದ ಗೌರಿಬಿದನೂರು ರಸ್ತೆಯ ಬಳಿ ಅಪರಿಚಿತ ವಾಹನವೊಂದು ಗರ್ಭಾವಸ್ಥೆಯಲ್ಲಿದ್ದ ಜಿಂಕೆಗೆ ಡಿಕ್ಕಿ ಹೊಡೆದಿದ್ದು, ಜಿಂಕೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಾಹನ ಚಕ್ರ ಜಿಂಕೆ ಮೇಲೆ ಹರಿದ ಪರಿಣಾಮ ಜಿಂಕೆಯ ಹೊಟ್ಟೆಯಲ್ಲಿದ್ದ ಜಿಂಕೆ ಮರಿಗಳು ಸೇರಿದಂತೆ ತಾಯಿ ಜಿಂಕೆ ಮೃತಪಟ್ಟಿದೆ, ಮಧ್ಯರಾತ್ರಿ ಈ ಘಟನೆ ಜರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಶ್ವತ್ ಎಂಬುವರು ಅರಣ್ಯ ಅಧಿಕಾರಿ ಸುರೇಶ್ ಅವರಿಗೆ ಮಾಹಿತಿ ನೀಡಿದ್ದು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಜಿಂಕೆ ಹಾಗೂ ಜಿಂಕೆ ಮರಿಗಳನ್ನು ದೇಹ ವಶಕ್ಕೆ ಪಡೆದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!