ದೇವಾಲಯಕ್ಕೆ ಹಾಕಿದ್ದ ಬೀಗ ತೆರವು

83

Get real time updates directly on you device, subscribe now.


ಕುಣಿಗಲ್: ದೇವಾಲಯಕ್ಕೆ ಅರ್ಚಕ ಬೀಗ ಜಡಿದ ಕಾರಣ ನಾಗರಿಕರ ಒತ್ತಾಯದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬೀಗ ತೆರವುಗೊಳಿಸಿದ ಘಟನೆ ನಡೆದಿದೆ.
ಪಟ್ಟಣದ ದೊಡ್ಡಕೆರೆ ಏರಿಮೇಲಿರುವ ಶ್ರೀಪದ್ಮೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅರ್ಚಕರೊಬ್ಬರು ನಿಯೋಜನೆಗೊಂಡಿದ್ದರು, ಅವರು ಸಮರ್ಪಕ ಪೂಜೆ ಸಲ್ಲಿಸದ ಕಾರಣ ದೇವಾಲಯದ ಭಕ್ತಾದಿಗಳೇ ಸ್ಥಳೀಯ ವ್ಯಕ್ತಿ ಒಬ್ಬರನ್ನು ಪೂಜಾ ಕೈಂಕರ್ಯ ನಿರ್ವಹಿಸಲು ನೇಮಿಸಿದ್ದರು, ಅದರಂತೆ ಕಳೆದ ಹಲವಾರು ವರ್ಷಗಳಿಂದ ನಾಗರಿಕರು ನೇಮಿಸಿದ ವ್ಯಕ್ತಿ ಪೂಜೆ ಸಲ್ಲಿಸುತ್ತಿದ್ದು, ಈ ಬಗ್ಗೆ ಅಸಮಾಧಾನಗೊಂಡ ಹಿಂದಿನ ಅರ್ಚಕ ಬುಧವಾರ ದೇವಾಲಯಕ್ಕೆ ಬೀಗ ಜಡಿದು ತೆರಳಿದ್ದರು ಎನ್ನಲಾಗಿದೆ, ಈ ವೇಳೆ ಪೂಜೆ ಸಲ್ಲಿಸಲು ಆಗಮಿಸಿದ ಭಕ್ತರಿಗೆ ಅಚ್ಚರಿ ಕಾದಿತ್ತು, ಹಿಂದಿನ ಅರ್ಚಕರ ನಡೆ ಖಂಡಿಸಿದ ಭಕ್ತಾದಿಗಳು, ಕೋಟೆ ಪ್ರದೇಶದ ನಾಗರಿಕರು ಪುರಸಭೆ ಸದಸ್ಯರಾದ ನಾಗಣ್ಣ, ರಂಗಸ್ವಾಮಿ, ಉದಯ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಕೋಟೆ ಪ್ರದೇಶದ ಮುಖಂಡರಾದ ಸಂತೋಷ್.ಜಿ, ಚಂದ್ರಶೇಖರ, ವೆಂಕಟೇಶ, ಶ್ರೀನಿವಾಸ್ ಇತರರು ತಹಶೀಲ್ದಾರ್ ಗಮನಕ್ಕೆ ತಂದು ಈ ಹಿಂದೆ ನಿಯೋಜಿಸಲ್ಪಟ್ಟಿರುವ ಅರ್ಚಕರು ಪೂಜೆ ಸಲ್ಲಿಸುತ್ತಿಲ್ಲ ಎಂದು ಆರೋಪಿಸಿದ ನಾಗರಿಕರು ನಾವೇ ನಿಯೋಜಿಸಿರುವ ಅರ್ಚಕ ಮಹೇಶ್ ಎಂಬುವರಿಗೆ ಪೂಜೆ ಮಾಡಲು ಅವಕಾಶ ಮಾಡಿ ಕೊಡಬೇಕೆಂದು ಆಗ್ರಹಿಸಿದರು. ತಹಶೀಲ್ದಾರ್ ಸೂಚನೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ ಪರಮೇಶ್, ಮುರಳಿಧರ್ ದೇವಾಲಯಕ್ಕೆ ಹಾಕಿದ್ದ ಬೀಗ ತೆರವುಗೊಳಿಸಿ ಮಹಜರ್ ನಡೆಸಿ ನಾಗರಿಕರ ಸಮ್ಮುಖದಲ್ಲಿ ಮಹೇಶ್ ಪೂಜೆ ನಿರ್ವಹಿಸಲು ಸೂಚಿಸಿದರು.

Get real time updates directly on you device, subscribe now.

Comments are closed.

error: Content is protected !!