ತುಮಕೂರು: ಕಲ್ಪತರು ನಾಡಿಗೆ ಶೈಕ್ಷಣಿಕ ನಗರ ಎಂದು ಹೆಸರು ಬರಲು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗಂಗಾಧರಯ್ಯಪಾಲಿದೆ, ಅದೇ ರೀತಿ ತುಮಕೂರಿಗೆ 2004 ರಲ್ಲಿ ವಿಶ್ವ ವಿದ್ಯಾಲಯ ತಂದ ಕೀರ್ತಿ ಇಂದಿನ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಸಲ್ಲುತ್ತದೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಮತ ವ್ಯಕ್ತಪಡಿಸಿದ್ದಾರೆ.
ನಗರದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಡಾ.ಹೆಚ್.ಎಂ.ಗಂಗಾಧರಯ್ಯ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಎನ್ ಎಸ್ ಎಸ್, ಎನ್ ಸಿ ಸಿ, ರೆಡ್ ರಿಬ್ಬನ್, ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ- ಗಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತನ್ನದೆ ವೈಶಿಷ್ಟ್ಯ ಹೊಂದಿರುವ ತುಮಕೂರು ಅನೇಕ ವಿದ್ಯಾ ಸಂಸ್ಥೆ, ತಂತ್ರಜ್ಞರು, ವಿಜ್ಞಾನಿಗಳು, ಸಾಹಿತ್ಯ, ಕಲೆ- ಸಾಂಸ್ಕೃತಿಕ ಸಂಪ್ರದಾಯಕ್ಕೆ ಒತ್ತು ನೀಡಿದೆ, ನಡೆದಾಡುವ ದೇವರೆನಿಸಿದ ಡಾ.ಶಿವಕುಮಾರ ಶ್ರೀಗಳಂತ ಅನೇಕ ಮಹಾನ್ ನಾಯಕರನ್ನು ಕೊಡುಗೆಯಾಗಿ ಈ ನಾಡಿಗೆ ನೀಡಿದೆ ಎಂದು ವೆಂಕಟೇಶ್ವರಲು ಹೇಳಿದರು.
30 ವರ್ಷದಿಂದ ವಿದ್ಯಾರ್ಥಿಗಳ ನಡುವೆ ಪಾಠ, ಪ್ರವಚನ ಜೊತೆಗೆ ಜೊತೆಗೆ ಇದ್ದೇನೆ, ವಿದ್ಯಾರ್ಥಿಗಳಿಗೆ ಉದ್ಯೋಗ ಗಿಟ್ಟಿಸುವ ಸುಲಭ ಮಾರ್ಗವಿದ್ದರೂ ಹಲವು ಸವಾಲು ಇಂದು ಎದುರಾಗುತ್ತಿವೆ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಇರಬೇಕು, ಜ್ಞಾನರ್ಜನೆ ಜೊತೆಗೆ ಉದ್ಯೋಗ ಪಡೆದುಕೊಳ್ಳಲು ಒತ್ತು ನೀಡಿ, ಆಸಕ್ತರಾಗಿ ಓದಿದಾಗ ಎಂಥ ಕೆಲಸವು ಸುಲಭವಾಗಿ ಪಡೆಯಬಹುದು, ಸಾಮಾನ್ಯನಿಗೆ ಇರುವ ತಾಳ್ಮೆ ಈಗಿನ ವಿದ್ಯಾರ್ಥಿಗಳಿಗೆ ಇಲ್ಲ, ಮಾನಸಿಕ ಆರೋಗ್ಯ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ತುಮಕೂರು ವಿಭಿನ್ನರೀತಿಯ ವಿಶೇಷ ಸ್ಥಾನ ಮಾನ ಹೊಂದಿದ್ದು, ಇಂಡಸ್ಟ್ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಉತ್ಪಾದನಾ ಘಟಕಗಳು ಇವೆ, ಕಲ್ಪತರು ನಾಡಿನ ಕೊಬ್ಬರಿಗೆ ದೇಶ ವಿದೇಶಗಳಲ್ಲಿ ವಿಶೇಷ ಬೇಡಿಕೆ ಇದೆ, ಅಡಿಕೆಯಿಂದ ಟೀ ಮಾಡಬಹುದು ಎಂದು ತುಮಕೂರಿನ ಯುವಕನೊಬ್ಬ ನಿರೂಪಿಸಿದ್ದಾನೆ ಎಂದು ಉಪ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ನುಡಿದರು.
ಬೆಂಗಳೂರಿನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಎ.ಅನ್ನದಾನೇಶ್ ಮಾತನಾಡಿ, ಹಿಂದಿನ ವಿವಿಗಳಲ್ಲಿ ಸಾಮಾನ್ಯ ಜ್ಞಾನ ಇತ್ತು, ಇಂದಿನ ವಿವಿಯಲ್ಲಿ ಕೌಶಲ್ಯಇದೆ, 12ನೇ ಶತಮಾದಲ್ಲಿ ಇವೆರಡು ವಿಚಾರಗಳು ಜೊತೆಗೆ ಇದ್ದವು, ಆದರೆ ಇಂದು ಕೌಶಲ್ಯ ತಮ್ಮದೇ ಆದ ವಿಚಾರ ವಂತಿಕೆ ಹುಟ್ಟು ಹಾಕಿವೆ ಎಂದರು.
ಸಾಹಿತ್ಯದಲ್ಲಿ ಪ್ರೀತಿ ಇರಬೇಕು, ಕಾವ್ಯ- ದ್ರವ್ಯದಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಆಸಕ್ತಿಯಿಲ್ಲ, ಹಳೆಯ ಕಾವ್ಯಗಳ ಪದ ಪಾಂಡಿತ್ಯ ಇಂದಿನ ಕಾವ್ಯಗಳಲ್ಲಿ ಇಲ್ಲ, ಇಂದು ದ್ವೇಷದ ಕವಿತೆಗಳು ಹೆಚ್ಚಿವೆ, ನೋವಿನಿಂದ ಹುಟ್ಟಿದ ಹಲವು ಕಾವ್ಯ ಕವನಗಳಿಗೆ ಸಾವಿಲ್ಲ, ಕವಿತೆಗೆ ಬಳಸುವ ಸಲಕರಣೆಗಳು ಇಂದು ನಾಶವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಹೇಮಾಲತಾ, ಸಹಾಯಕ ಆಡಳಿತಾಧಿಕಾರಿ ಕೆ.ಹೆಚ್.ಖಲಂದರ್ ಪಾಷಾ, ಕುಣಿಗಲ್ ನ ಪ್ರಥಮ ದರ್ಜೆ ಕಾಲೇಜಿ ಕನ್ನಡ ಪ್ರಾಧ್ಯಾಪಕ ಡಾ.ಎಂ.ಗೋವಿಂದರಾಯ, ಚೆನ್ನರಾಯಪಟ್ಟಣದ ಚಿತ್ರ ಕಲಾವಿದ ಜಿ.ಎಸ್.ಶಿವಶಂಕರಪ್ಪ, ಕನ್ನಡ ವಿಭಾಗದ ಪ್ರೊ.ಮುಖ್ಯಸ್ಥ ಪ್ರೊ.ರಮೇಶ್ ಮಣ್ಣೆ, ಪ್ರೊ.ಹನುಮಂತರಾಯಪ್ಪ, ಗಮಕಿಗಳಾದ ಸೀತಾಲಕ್ಷೀ ಶರ್ಮಾ ಇತರರು ಹಾಜರಿದ್ದರು.
Comments are closed.