ಗಣರಾಜ್ಯೋತ್ಸವ ಅರ್ಥಪೂರ್ಣವಾಗಿರಲಿ

81

Get real time updates directly on you device, subscribe now.


ಗುಬ್ಬಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ 74ನೇ ಗಣರಾಜ್ಯೋತ್ಸವ ದಿನಾಚರಣೆ ಮತ್ತು ಸಿದ್ಧರಾಮ ಜಯಂತಿ, ವೇಮನ ಜಯಂತಿ, ಅಂಬಿಗ ಚೌಡಯ್ಯ ಜಯಂತಿಯ ಪೂರ್ವಭಾವಿ ಸಭೆ ತಾಲೂಕು ಕಚೇರಿ ಕಂದಾಯ ಭವನದಲ್ಲಿ ತಹಶೀಲ್ದಾರ್ ಆರತಿ.ಬಿ. ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಸಭೆಯ ಪ್ರಾರಂಭಿಕ ವಾಗಿ ಕಳೆದ ಬಾರಿ ಆಚರಣೆ ಮಾಡಿದ ನಡವಳಿಯನ್ನು ಸಭೆಯಲ್ಲಿ ತಹಶೀಲ್ದಾರ್ ಆರತಿ.ಬಿ. ಪ್ರಸ್ತಾಪಿಸಿ ವೇದಿಕೆ, ಸಭಾ ವೇದಿಕೆಯ ಆಗು ಹೋಗುಗಳು, ಪಥ ಸಂಚಲನ, ಸನ್ಮಾನಿತರಿಗೆ ಗೌರವಿಸುವ ವಿಚಾರ ಪ್ರಸ್ತಾಪ ಮಾಡಿ ಯಾವುದೇ ಬದಲಾವಣೆಯ ಅವಶ್ಯಕತೆ ಇಲ್ಲ ಎಂಬ ಚರ್ಚೆಗೆ ಬಂದು ಕಳೆದ ಬಾರಿಯಂತೆ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲು ನಿರ್ಣಯ ಮಾಡಲಾಯಿತು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಧ್ವಜಾರೋಹಣ, ಧ್ವಜ ವಂದನೆ, ಕ್ರೀಡೆಯಲ್ಲಿ ರಾಷ್ಟ್ರ ಹಾಗೂ ಅಂತಾರಾಜ್ಯದಲ್ಲಿ ಸಾಧನೆಗೈದ ಕ್ರೀಡಾಪಟುಗಳು ಹಾಗೂ ಇತ್ತೀಚಿಗೆ ತಾಲೂಕಿನ ಕಸಬಾ ಹೋಬಳಿ ತೊರೆಹಳ್ಳಿ ಗ್ರಾಮದ ಸಂಪತ್ತು ಎಂಬ ಸೈನಿಕರಿಗೆ ಭಾರತ ಸರ್ಕಾರವು ಶೌರ್ಯ ಪ್ರಶಸ್ತಿ ಘೋಷಣೆ ಮಾಡಿದ ಹಿನ್ನೆಲೆ ಅವರ ಪೋಷಕರಿಗೆ ಅಭಿನಂದನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಜನವರಿ 15 ಶಿವಯೋಗಿ ಸಿದ್ಧರಾಮ ಜಯಂತಿ, ಜನವರಿ 19 ಮಹಾಯೋಗಿ ವೇಮನ ಜಯಂತಿ, ಜನವರಿ 21 ಅಂಬಿಗ ಚೌಡಯ್ಯ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ಸರಳವಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ಪ್ರಾಚಾರ್ಯ ಪ್ರಸನ್ನ, ಪಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!