ಮಧುಗಿರಿ: ಅಂಗಾಂಗ ವೈಲ್ಯದಿಂದ ಮೃತಪಟ್ಟಿದ್ದ ಗ್ರಾಪಂ ಕಾರ್ಯದರ್ಶಿ ಶವ ಸಂಸ್ಕಾರದ ಸ್ಥಳ ನಿಗದಿಗಾಗಿ 2 ಗ್ರಾಮಗಳ ಗ್ರಾಮಸ್ಥರ ನಡುವೆ ನಡೆದ ಘರ್ಷಣೆ ಕಂದಾಯ ಇಲಾಖೆ, ಪೊಲೀಸರು, ಮಾದಿಗ ದಂಡೋರ ಸಮಿತಿ ಹಾಗೂ ಗ್ರಾಪಂ ಅಧಿಕಾರಿಗಳ ಸಂಧಾನದಿಂದ ಅಂತಿಮ ಕಾರ್ಯ ಸುಗಮವಾಗಿ ಶನಿವಾರ ನಡೆಯಿತು.
ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರ ಗ್ರಾಪಂ ಕಾರ್ಯದರ್ಶಿ ನರಸಪ್ಪ (55) ಶುಕ್ರವಾರ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು, ಶುಕ್ರವಾರವಾಗಿದ್ದರಿಂದ ಶವ ಸಂಸ್ಕಾರ ಮಾಡಿರಲಿಲ್ಲ, ಇವರು ಮಧುಗಿರಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವರಾಗಿದ್ದು ಬಸವನಹಳ್ಳಿ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶವ ಸಂಸ್ಕಾರ ಮಾಡಲು ತೀರ್ಮಾನಿಸಲಾಗಿತ್ತು, ಆದರೆ ದೇವಸ್ಥಾನದ ಟ್ರಸ್ಟ್ ನವರು ಶವಸಂಸ್ಕಾರಕ್ಕೆ ಅನುಮತಿ ನಿರಾಕರಿಸಿದರು.
ನಂತರ ವಡೇರಹಳ್ಳಿ ಗ್ರಾಮದ ಸರ್ವೆ ನಂಬರ್ 48 ರಲ್ಲಿ ಜಿಲ್ಲಾಧಿಕಾರಿಗಳು ಇಪ್ಪತ್ತು ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿದ್ದ ಸ್ಥಳಕ್ಕೆ ಶವವನ್ನು ಶನಿವಾರ ಬೆಳಗ್ಗೆ ತಂದರು. ಮೃತಪಟ್ಟವ ದಲಿತನಾಗಿದ್ದು ಬಸವನಹಳ್ಳಿ ಗ್ರಾಮದವರು ಇಲ್ಲಿ ಶವಸಂಸ್ಕಾರ ಮಾಡಬಾರದೆಂದು ವಡೇರಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದರು, ಆಗ ಕೆಲ ಸಮಯ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸ್ಟೆಲ್ಲಾ ವರ್ಗೀಸ್, ಸಿಪಿಐ ಎಂ.ಎಸ್.ಸರ್ದಾರ್, ಸಿದ್ಧಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೌಡಪ್ಪ, ಪಿಎಸ್ಐ ಮಂಗಳಗೌರಮ್ಮ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಸಿದ್ಧಾಪುರ ರಂಗಶಾಮಣ್ಣ, ರೆವಿನ್ಯೂ ಇನ್ಸ್ಪೆಕ್ಟರ್, ಗ್ರಾಮ ಲೆಕ್ಕಿಗ ಮತ್ತು ಪೊಲೀಸರು ವಡೇರಹಳ್ಳಿ ಗ್ರಾಮಸ್ಥರಿಗೆ ಈ ಸ್ಮಶಾನ ಜಾಗವೂ ವಡೇರಹಳ್ಳಿ ಬಸವನಹಳ್ಳಿಯ ಎರಡೂ ಗ್ರಾಮದವರು ಉಪಯೋಗಿಸಬಹುದೆಂದು ಮತ್ತು ಪಹಣಿಯಲ್ಲಿ ಎರಡೂ ಗ್ರಾಮದವರ ಉಪಯೋಗಕ್ಕೆಂದು ನಮೂದಾಗಿರುವುದನ್ನು ತೋರಿಸಿದ ನಂತರ ಶವ ಸಂಸ್ಕಾರ ಸುಸೂತ್ರವಾಗಿ ನಡೆಯಿತು.
ಅಧಿಕಾರಿಗಳ ಎಂಟ್ರಿಯಿಂದ ಶವ ಸಂಸ್ಕಾರ ಸ್ಥಳ ವಿವಾದಕ್ಕೆ ತೆರೆ
ಮೃತ ಗ್ರಾಪಂ ಕಾರ್ಯದರ್ಶಿ ಸಂಸ್ಕಾರ ಸುಸೂತ್ರಮೃತ ಗ್ರಾಪಂ ಕಾರ್ಯದರ್ಶಿ ಸಂಸ್ಕಾರ ಸುಸೂತ್ರ
Get real time updates directly on you device, subscribe now.
Prev Post
Comments are closed.