ಇಪ್ಪತ್ತೊಂದಡಿ ಎತ್ತರದ ನಂದಿ ಅನಾವರಣ

ಸದ್ಗುರು ಸನ್ನಿಧಿಯಲ್ಲಿ ಸುಗ್ಗಿ ಸಂಕ್ರಾಂತಿ ಆಚರಣೆಗೆ ಸಿದ್ಧತೆ

45

Get real time updates directly on you device, subscribe now.


ಚಿಕ್ಕಬಳ್ಳಾಪುರ: ಇಲ್ಲಿನ ಸದ್ಗುರು ಸನ್ನಿಧಿಯು, ಜ.15, 2024 ರಂದು ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ, ಸುಗ್ಗಿಯ ಹಬ್ಬವಾದ ಸಂಕ್ರಾಂತಿಯ ಸಾಂಪ್ರದಾಯಿಕ ಆಚರಣೆಗೆ ಸಕಲ ಸಿದ್ಧತೆ ನಡೆಸಿದೆ. ಸಾಂಸ್ಕೃತಿಕ ಪ್ರದರ್ಶನ ಮತ್ತು ವರ್ಣರಂಜಿತ ಸಂಕ್ರಾಂತಿ ಜಾತ್ರೆಯನ್ನು ಒಳಗೊಂಡಿರುವ ಸಾಂಪ್ರದಾಯಿಕ ಉತ್ಸವಗಳಲ್ಲಿ ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ನೂತನವಾಗಿ ಪ್ರತಿಷ್ಠಾಪಿಸಲಾಗುವ 21 ಅಡಿ ನಂದಿ ಮತ್ತು 54 ಅಡಿಯ ಮಹಾಶೂಲವು ಸಂಜೆ 5 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ. ನಿರಂತರ ಜನಪ್ರಿಯತೆ ಗಳಿಸುತ್ತಿರುವ ದಿನನಿತ್ಯದ ಆಕರ್ಷಕ ಅದಿಯೋಗಿಯ ವಿಡಿಯೋ ಇಮೇಜಿಂಗ್ ಶೋ ಜೊತೆಗೆ ವಿಶೇಷ ಲೇಸರ್ ಶೋ ಹೆಚ್ಚುವರಿ ಅಕರ್ಷಣೆಯಾಗಿರಲಿದೆ.

ಅಕ್ಟೋಬರ್ 2022 ರಲ್ಲಿ ನಾಗ ಪ್ರತಿಷ್ಠಾಪನೆಯೊಂದಿಗೆ ಸದ್ಗುರು ಸನ್ನಿಧಿಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಕಳೆದ ವರ್ಷದಲ್ಲಿ ಲಕ್ಷಾಂತರ ಜನರು ಸದ್ಗುರು ಸನ್ನಿಧಿಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಜನರಲ್ಲಿನ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಇಶಾ ಪೌಂಡೇಷನ್ ಮಾಡಿಕೊಂಡು ಬಂದಿದೆ ಹಾಗೇ ಸದ್ಗುರು ಸನ್ನಿಧಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದು ಗಮನಾರ್ಹವಾಗಿದೆ.

Get real time updates directly on you device, subscribe now.

Comments are closed.

error: Content is protected !!