ಜಾಗ ಅತಿಕ್ರಮಿಸಿ ಕಟ್ಟಿದ್ದ ಕಟ್ಟಡ ನೆಲಸಮ

73

Get real time updates directly on you device, subscribe now.


ಕುಣಿಗಲ್: ಪುರಸಭೆಗೆ ಸೇರಿದ ಆಶ್ರಯ ನಿವೇಶನ ವಿತರಣೆಗೆ ಮೀಸಲಾಗಿದ್ದ ಕಂದಾಯ ಜಾಗ ಅತಿಕ್ರಮಿಸಿ ನಿರ್ಮಾಣ ಮಾಡಲಾಗಿದ್ದು ಕಟ್ಟಡವನ್ನು ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ನೇತೃತ್ವದಲ್ಲಿ ಮಂಗಳವಾರ ತೆರವುಗೊಳಿಸಲಾಯಿತು.
ಪುರಸಭೆಯ ಎರಡನೇ ವಾರ್ಡ್ನ ಮಲ್ಲಾಘಟ್ಟ ಗ್ರಾಮದ ಸರ್ವೇ ನಂಬರ್ 24 ರಲ್ಲಿನ 9.18 ಎಕರೆ ಗೋಮಾಳ ಖರಾಬು ಭೂಮಿಯನ್ನು ಪುರಸಭೆ ವ್ಯಾಪ್ತಿಯ ವಸತಿ ರಹಿರಿಗೆ ನಿವೇಶನ ನೀಡಲು 2002- 03ರಲ್ಲಿ ಜಾಗ ಗುರುತಿಸಿ ಮೀಸಲಿಡಲಾಗಿತ್ತು, ಕಾರಣಾಂತರಗಳಿಂದ ನಿವೇಶನ ವಿಂಗಡನೆ, ವಸತಿ ರಹಿತರ ಗುರುತಿಸುವ ಕಾರ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ನೆನೆಗುದಿಗೆ ಬಿದ್ದ ಕಾರಣ ಸದರಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಿಸಿ ಜಾಗ ಅತಿಕ್ರಮಿಸಿದ್ದರು.

ಶಾಸಕ ಡಾ.ರಂಗನಾಥ್, ವಸತಿ ರಹಿತರಿಗೆ ನಿವೇಶನ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದ್ದು ಸ್ಥಳ ಪರಿಶೀಲನೆ ಸಮಯದಲ್ಲಿ ಕೆಲವರು ಜಾಗ ಅತಿಕ್ರಮಿಸಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದರು, ಪುರಸಭೆಗೆ ಸೇರಿದ ಜಾಗ ಅತಿಕ್ರಮಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪುರಸಭೆ ಜಾಗ ಅತಿಕ್ರಮಿಸಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಕಟ್ಟಡ ಮಾಲೀಕರ ತೀವ್ರ ವಿರೋಧದ ನಡುವೆ ತೆರವುಗೊಳಿಸಿದರು, ಪೊಲೀಸ್ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!