ಕುದುರೆ ಫಾರಂ ಉಳಿವಿಗಾಗಿ ಪ್ರತಿಭಟನೆ ಇಂದು

48

Get real time updates directly on you device, subscribe now.


ಕುಣಿಗಲ್: ಪಟ್ಟಣದ ಪಾರಂಪರಿಕ ಕುದುರೆ ಫಾರಂ ಜಾಗ ಉಳಿಸುವ ನಿಟ್ಟಿನಲ್ಲಿ ಪಾರಂಪರಿಕ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಸಮಿತಿ ವತಿಯಿಂದ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಮೆರವಣಿಗೆ ಪಕ್ಷಾತೀತವಾಗಿ ನಡೆಸುತ್ತಿರುವ ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ವಿವಿಧ ಮುಖಂಡರು ಮನವಿ ಮಾಡಿದ್ದಾರೆ.
ತಾಲೂಕು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಕುದುರೆ ಫಾರಂ ಉಳಿವಿಗಾಗಿ ಹಮ್ಮಿಕೊಂಡಿರುವ ಹೋರಾಟ ಸಮಿತಿಯ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ.

ಬಿಜೆಪಿ ಮುಖಂಡಿ ರಾಜೇಶ್ ಗೌಡ ಸಹ ತಮ್ಮ ಅಪಾರ ಬೆಂಬಲಿಗರು ಪಾರಂಪರಿಕ ತಾಣವಾದ ಕುದುರೆ ಫಾರಂ ಉಳಿಸುವ ನಿಟ್ಟಿನಲ್ಲಿ ಆಗಮಿಸಿ ಬೆಂಬಲಿಸುವಂತೆ ಮನವಿ ಮಾಡಿ ಪಕ್ಷಾತೀತವಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಕಾರ್ಯತಂತ್ರ ರೂಪಿಸಿದ್ದಾರೆ, ಜೆಡಿಎಸ್ ಅಧ್ಯಕ್ಷ ಜಗದೀಶ್ ಈಗಾಗಲೆ ಕುದುರೆ ಫಾರಂ ಉಳಿಸುವಂತೆ ಮಾಜಿ ಪ್ರಧಾನಿ ದೇವೆಗೌಡರು, ಮಾಜಿ ಸಿಎಂ ಕುಮಾರಸ್ವಾಮಿಯವರ ಗಮನ ಸೆಳೆದು ರಾಜ್ಯ ಸರ್ಕಾರಕ್ಕೆ ಮುಖಂಡರಿಂದ ಪತ್ರಬರೆದು ಯಥಾಸ್ಥಿತಿ ಉಳಿಸುವಂತೆ ಒತ್ತಾಯಿಸಿ, ಹಲವು ಸುತ್ತಿನ ಪೂರ್ವಭಾವಿ ಸಭೆ ನಡೆಸಿದ್ದು ಎಲ್ಲಾ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷವೂ ಬೆಂಬಲ ಸೂಚಿಸಿದ್ದು ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲಿಸಲಿದ್ದಾರೆ ಎಂದು ತಾಲೂಕು ಮುಖಂಡ ಎಚ್.ಎ.ಜಯರಾಮಯ್ಯ ತಿಳಿಸಿದ್ದಾರೆ.

ತಾಲೂಕಿನ ವಿವಿಧ ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ವಕೀಲರ ಸಂಘ, ಇತರೆ ಸಂಘಟನೆಗಳು ಜೊತೆಯಲ್ಲಿ ಬೆಂಗಳೂರಿನಲ್ಲಿ ವಾಸವಿರುವ ಮೂಲ ಕುಣಿಗಲ್ ವಾಸಿಗಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಳಲಿದ್ದು, ಪರಸರ ಸಂರಕ್ಷಣೆ ಹಾಗೂ ಪಾರಂಪರಿಕ ತಾಣ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಹಲವು ರಾಜ್ಯಮಟ್ಟದ ಸಂಘಟನೆಯ ಕಾರ್ಯಕರ್ತರು, ಪ್ರಮುಖರು ಸಹ ಹೋರಾಟದಲ್ಲಿ ಪಾಲ್ಗೊಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.
ಬೆಳಗ್ಗೆ ಕುದುರೆ ಫಾರಂ ಮುಂಭಾಗದಲ್ಲಿ ಜಮಾವಣೆಗೊಂಡು ತಾಲೂಕು ಕಚೇರಿವರೆಗೂ ಮೆರವಣಿಗೆ, ಪ್ರತಿಭಟನೆ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದು ತಾಲೂಕಿನ ವಿವಿಧೆಡೆಯಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟ ಯಶಸ್ವಿಗೊಳಿಸಿ ಪಾರಂಪರಿಕ ಕುದುರೆ ಫಾರಂ ಉಳಿಸಲು ಸಹಕರಿಸಬೇಕೆಂದು ಹೋರಾಟ ಸಮಿತಿಯ ಪ್ರಮುಖರು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!