ತುಮಕೂರು: ಯುವಕರು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸಿಕೊಂಡಷ್ಟೂ ದೈಹಿಕ ಕ್ಷಮತೆಯ ಜೊತೆಗೆ ಮಾನಸಿಕ ಸ್ಥಿರತೆ ಕೂಡ ಲಭಿಸುತ್ತದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಇನ್ನಿತರ ಅರೆ ವೈದ್ಯಕೀಯ ಕೋರ್ಸ್ಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ವೈದ್ಯಕೀಯ ರಂಗದಲ್ಲಿರುವ ಯಾವುದೇ ವಿದ್ಯಾರ್ಥಿಯಾಗಲಿ ಸದಾ ಶಿಕ್ಷಣ, ಕ್ರೀಡೆ ಹಾಗೂ ಉತ್ತಮ ಚಿಂತನೆ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.
ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ವೀಣಾ ಪರಮೇಶ್ ಮಾತನಾಡಿ, ನಮ್ಮ ಅರೆ ವೈದ್ಯಕೀಯ ಕೋರ್ಸ್ಗಳು ಯುವ ಜನರ ವೈದ್ಯಕೀಯ ಸೇವೆಗೆ ಉತ್ತಮ ಅವಕಾಶ ತೆರೆದಿಡುತ್ತಿದ್ದು ಶಿಕ್ಷಣದ ಪರೀಕ್ಷಾ ಫಲಿತಾಂಶದಲ್ಲಿಯೂ ಕೂಡ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾಗುತ್ತಿರುವುದು ನಮ್ಮ ಕಾಲೇಜಿಗೆ ಹೆಮ್ಮೆ ತರುವ ಸಂಗತಿ ಎಂದರು.
ವಾಲಿಬಾಲ್, ಬ್ಯಾಸ್ಕೆಟ್ ಬಾಲ್ ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ಪ್ಯಾರಾ ಮೆಡಿಕಲ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಇನ್ನೂ ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು ವಾರ್ಷಿಕ ಸಮಾರಂಭದಲ್ಲಿ ಗೆದ್ದ ತಂಡಗಳಿಗೆ ಪ್ರಶಸ್ತಿ ವಿತರಿಸಲಾಗುವುದು.
ಮೆಡಿಕಲ್ ಕಾಲೇಜು ಅಧೀಕ್ಷಕ ಡಾ.ನಿರಂಜನ ಮೂರ್ತಿ, ಮೈಕ್ರೋ ಬಯಾಲಜಿಸ್ಟ ಡಾ.ಕಿರಣ್ ಕುಮಾರ್, ಮೀನಾ ಕುಮಾರಿ, ರೂಪ, ಈಶ್ವರ್ ಹಾಗೂ ಉಪನ್ಯಾಸಕರು, ಸಿಬ್ಬಂದಿ ಹಾಜರಿದ್ದರು.
Comments are closed.