ವಿದ್ಯಾ ಚೌಡೇಶ್ವರಿಗೆ ದೇವೇಗೌಡರಿಂದ ವಜ್ರ ಖಚಿತ ಕಿರೀಟ ಸಮರ್ಪಣೆ

48

Get real time updates directly on you device, subscribe now.


ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಹಂಗರಹಳ್ಳಿ ಸಮೀಪದ ಕೆ.ಜಿ.ದೇವಪಟ್ಟಣ ಗ್ರಾಮದಲ್ಲಿನ ವಿದ್ಯಾಚೌಡೇಶ್ವರಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಅಮ್ಮನವರ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಪಾಲ್ಗೊಂಡು ಅಮ್ಮನವರಿಗೆ ವಜ್ರ ಖಚಿತ ಕಿರೀಟ ಸಮರ್ಪಿಸಿದರು.
ಬುಧವಾರ ಬೆಳಗ್ಗೆ ಶ್ರೀಮಠದ ವಿದ್ಯಾ ಚೌಡೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಮಠಾಧೀಶ ಬಾಲ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ನಡೆದ ವರ್ಧಂತಿ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಪಾಲ್ಗೊಂಡರು. ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ವಜ್ರ ಕಿರೀಟವನ್ನು ಶ್ರೀಅಮ್ಮ ನವರಿಗೆ ಸಮರ್ಪಿಸಿದರು.

ಈ ವೇಳೆ ಧಾರ್ಮಿಕ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ತಮಗೂ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದರೆ ಮೇರೆಗೆ ಕ್ಷೇತ್ರಕ್ಕೆ ಭೇಟಿ ನೀಡಿ ಅಮ್ಮನವರಿಗೆ ಪೂಜೆ ಸಲ್ಲಿಸಿದ್ದೇನೆ, ಅನಾರೋಗ್ಯ ತೀವ್ರವಾಗಿರುವ ನಡುವೆ ಶ್ರೀಅಮ್ಮನವರಿಗೆ ಪೂಜೆ ಸಲ್ಲಿಸಿದ್ದು ಅಮ್ಮನ ಶಕ್ತಿಯೆ ನಮಗೆ ಶ್ರೀರಕ್ಷೆ ಎಂದರು.
ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಲಲ್ಲ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗಲು ಮನಸ್ಸಿದ್ದರೂ ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದು, ಶ್ರೀರಾಮನ ದಯೆಯಿಂದ ಆರೋಗ್ಯ ಸುಧಾರಿಸಿದರೆ ಹೋಗುತ್ತನೆ ಎಂದರು. ಮಾಜಿ ಸಚಿವ ಡಿ.ನಾಗರಾಜಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಹೇಮರಾಜು ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!