ಮಧುಗಿರಿ: ನ. 22 ರಂದು ಶಾಲೆಯ ಕೊಠಡಿಯ ಎರಡು ಬಾಗಿಲು ಒಡೆದು ಅಕ್ಷರ ದಾಸೋಹದ ದಾಸ್ತಾನು ಸೇರಿದಂತೆ ಸಿಲಿಂಡರ್ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಕೊಡಿಗೇನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಪುರವರ ಹೋಬಳಿಯ ಕೋಡಗದಾಲ ಗ್ರಾಮದ ಶ್ರೀಕಾಳಿದಾಸ ಪ್ರೌಢಶಾಲೆಯ ಅಕ್ಷರ ದಾಸೋಹದ ಕೊಠಡಿಯ ಎರಡು ಬಾಗಿಲು ಒಡೆದು ಸುಮಾರು 236 ಕೆಜಿ ಬೇಳೆ, ಅಕ್ಕಿ 200 ಕೆಜಿ, 85 ಕೆಜಿ ಗೋಧಿ, ಸಿಲಿಂಡರ್ 2 ಸೇರಿದಂತೆ ಸುಮಾರು 18 ಸಾವಿರ ಮೌಲ್ಯದ ವಸ್ತುಗಳು ಕಳುವಾಗಿರುವ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವೈಎಸ್ಪಿ ರಾಮಚಂದ್ರ, ಸಿಪಿಐ ಹನುಮಂತರಾಯಪ್ಪ, ಮಾರ್ಗದರ್ಶನದಲ್ಲಿ ಪಿಎಸೈ ಶ್ರೀನಿವಾಸ್ ಪ್ರಸಾದ್. ಎಸ್.ಜಿ. ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿ ಎ1 ಆರೋಪಿ ಮಧುಗಿರಿ ದೊಡ್ಡಪೇಟೆಯ ನವೀನ್ ಬಿನ್ ಓಬಳೇಶಪ್ಪ, ಎ3 ಆರೋಪಿ ಮಧುಗಿರಿಯ ಕರಡಿಪುರದ ಆಫ್ತಾಬ್ ಅಪ್ರಾಪ್ ಬಿನ್ ಅಲಿ ಖಾನ್ ರನ್ನು ಬಂಧಿಸಿ ಕಳವು ಮಾಡಲು ಬಳಸಿದ್ದ ಲಗೇಜ್ ಆಟೋ ಹಾಗೂ 4 ಗ್ಯಾಸ್ ಸಿಲೆಂಡರ್ ಗಳನ್ನು ವಶಕ್ಕೆ ಪಡೆದಿದ್ದು ಎ2 ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸಿಬ್ಬಂದಿ ಮಂಜುನಾಥ.ಎಂ, ರಮೇಶ್, ನರಸಿಂಹಮೂರ್ತಿ, ಜಯರಾಮಯ್ಯ, ಶ್ರೀನಿವಾಸ್.ಎಸ್, ಪಾಂಡುರಂಗ ರಾವ್, ಬೋಗ ನರಸಿಂಹಯ್ಯ, ಬಾಲಾಜಿ ನಾಯ್ಕ ಆರೋಪಿಗಳನ್ನು ಪತ್ತೆ ಮಾಡಲು ಶ್ರಮಿಸಿದ್ದು ಎಸ್ಪಿ ಅಶೋಕ್.ಕೆ.ಎ ಅಭಿನಂದಿಸಿದ್ದಾರೆ.
Comments are closed.