ಬರಗೂರು: ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೂರ ತರಂಗ ಶಿಕ್ಷಣ ವರದಾನವಾಗಿದೆ, ಇದರ ಉಪಯೋಗ ಪಡೆದುಕೊಂಡಾಗ ಮಾತ್ರ ಅದಕ್ಕೊಂದು ಅರ್ಥ ಸಿಗುವುದರ ಜೊತೆಗೆ ಸಾಮಾಜಿಕ ಜ್ಞಾನ ದೊರೆಯಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಹಾಗೂ ಸಮರ್ಪಣ ಇನ್ಫೋಸಿಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದೂರ ತರಂಗ ಶಿಕ್ಷಣ ಯೋಜನೆ ಮತ್ತು ಕೌಶಲ್ಯ ನೈಪುಣ್ಯ ಯೋಜನೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡುವ ಜೊತೆಗೆ ಸರ್ಕಾರ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನ ಮಾಡುತ್ತಿದೆ ಎಂದರು.
ಕಂಪ್ಯೂಟರ್ ಶಿಕ್ಷಣ ಬರಿ ಸೇವ್ ಮಾಡಿದ್ದನ್ನ ಮಾತ್ರ ಓದುವುದು ಬೇಡ, ಬೇರೆ ಬೇರೆ ಮಾಹಿತಿ ಸಂಗ್ರಹಣೆ ಮಾಡಲು ಬಳಸಲು ನಾವು ಕಂಪ್ಯೂಟರ್ ಬಳಸಬೇಕು, ಹುಡುಕುವ ಜ್ಞಾನ ಬಳಸಿದಾಗ ಮಾತ್ರ ಉತ್ತಮ ಜ್ಞಾನ ಬರುವುದು, ಉತ್ತಮ ಶಿಕ್ಷಣ ಪಾಠ ಮಾಡುವ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದು ಶೇಷ್ಠ ಕಾರ್ಯವಾಗಿದೆ ಎಂದರು.
ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಾತನಾಡಿ, ಗ್ರಾಮಾಂತರ ಶಾಲೆಯ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಸಿಗುವಂತ ವಿದ್ಯಾಭ್ಯಾಸ ಸಿಗುತ್ತಿಲ್ಲ ಎಂಬ ಕೊರಗಿತ್ತು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಎಷ್ಟೋ ಮಂದಿ ಉನ್ನತ ಜ್ಞಾನವಂತರಾಗಿದ್ದಾರೆ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ಶಿಕ್ಷಣ ಸರ್ಕಾರದ ಜವ್ದಾರಿಯಾಗದೆ ಪ್ರತಿಯೊಬ್ಬರ ಜವಾಬ್ದಾರಿತನವಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ತಹಶೀಲ್ದಾರ್ ಎಂ.ಮಮತ, ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕ ರೇವಣ್ಣಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಪ್ಪ, ಗ್ರಾಪಂ ಅಧ್ಯಕ್ಷ ಜಯರಾಮಯ್ಯ, ಗ್ರಾಪಂ ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಪಾಲ್ಗೊಂಡಿದ್ದರು.
ಬರಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ದೂರ ತರಂಗ ಶಿಕ್ಷಣ ಯೋಜನೆ ಉದ್ಘಾಟನೆ
ಹಳ್ಳಿ ಮಕ್ಕಳಿಗೆ ದೂರ ತರಂಗ ಶಿಕ್ಷಣ ವರದಾನ: ಮಾಧುಸ್ವಾಮಿ
Get real time updates directly on you device, subscribe now.
Prev Post
Next Post
Comments are closed.