ಶ್ರೀರಾಮೋತ್ಸವ- ದೇಗುಲಗಳಲ್ಲಿ ರಾಮ ತಾರಕ ಹೋಮ

33

Get real time updates directly on you device, subscribe now.


ಶಿರಾ: ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ಲೋಕಾರ್ಪಣೆಗೊಂಡ ಕ್ಷಣ, ಸಾರ್ವಜನಿಕ ಸಾರ್ವಜನಿಕರಲ್ಲಿ ತುಂಬು ಉತ್ಸಾಹ ತಂದಿದ್ದು ನಗರ ಸೇರಿದಂತೆ ಗ್ರಾಮಾಂತರದಲ್ಲೂ ಹಬ್ಬದ ವಾತಾವರಣವನ್ನು ತರುವಲ್ಲಿ ಯಶಸ್ವಿಯಾಯಿತು.
ನಗರದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ, ಕೊಳದಪಲೇಶ್ವರ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಗ್ರಾಮ ದೇವತೆ ಶ್ರೀ ದುರ್ಗಮ್ಮ ದೇವರ ಸನ್ನಿಧಿ, ವಿದ್ಯಾಗಣಪತಿ ಮಂದಿರ ಸೇರಿದಂತೆ 10 ಹಲವು ಜಾಗಗಳಲ್ಲಿ ರಾಮ ತಾರಕ ಹೋಮ ನೆರವೇರಿಸಲಾಯಿತು, ಹಲವಾರು ದೇವಾಲಯಗಳಲ್ಲಿಯೂ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ಹಂಚಲಾಯಿತು, ಬೀದಿಗಳಲ್ಲಿ, ಗಲ್ಲಿಗಳಲ್ಲಿ ಚಹಾ ಅಂಗಡಿ ಮುಂದೆ ರಾಮದೇವರ ಫೋಟೋ ಇಟ್ಟು ಪೂಜೆ ಸಲ್ಲಿಸಿ ಪಾನಕ- ಕೋಸಂಬರಿ ಮತ್ತು ಪ್ರಸಾದ ಹಂಚಲಾಯಿತು.

ಜನರು ವೈಯಕ್ತಿಕವಾಗಿ ತಮ್ಮ ದ್ವಿಚಕ್ರ ವಾಹನಗಳ ಮೇಲೆ ಶ್ರೀರಾಮನ ಘೋಷಣೆ ಇರುವ ಕೇಸರಿ ಧ್ವಜ ಕಟ್ಟಿಕೊಂಡು ಸಂಚಾರ ನಡೆಸುತ್ತಿದ್ದ ದೃಶ್ಯ ಕಂಡು ಬಂದಿತು, ಆಟೋ ಚಾಲಕರು ಸಹ ಭಗವಾಧ್ವಜವನ್ನು ಆಟೋಗಳ ಮೇಲೆ ಕಟ್ಟಿ ಸಂಭ್ರಮಿಸಿದರು.
ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿದ ಮಹಿಳೆಯರು, ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಬ್ಬವನ್ನಾಗಿ ಪರಿವರ್ತಿಸಿದ್ದರು, ರಾಮೋತ್ಸವಕ್ಕೆ ಸಾಥ್ ನೀಡಿದ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ತಮ್ಮ ಶಾಲೆಗಳಿಗೆ ರಜೆ ಘೋಷಿಸಿತ್ತು.

ದೀಪೋತ್ಸವ: ಪ್ರಧಾನಿ ಮೋದಿ ನೀಡಿದ ಕರೆಗೆ ಸ್ಪಂದಿಸಿದ ಜನತೆ ಸಂಜೆ ದೀಪಗಳನ್ನು ಹಚ್ಚಿ ದೀಪೋತ್ಸವ ಆಚರಿಸಿದರು, ದೀಪಾವಳಿಯ ಹಬ್ಬದಂತೆ ಹೊಸ್ತಿಲು ಮತ್ತು ತುಳಸಿ ಕಟ್ಟೆಯ ಮುಂದೆ ದೀಪಗಳ ಸಾಲು ಕಂಡು ಬಂದಿತು.
ಜಿನ ಮಂದಿರದಲ್ಲೂ ರಾಮ ಜಪ: ಇಲ್ಲಿನ ಬಾಲಾಜಿ ನಗರದಲ್ಲಿರುವ ಜೈನ ಮಂದಿರದಲ್ಲಿ ರಾಜಸ್ಥಾನ ಸಮಾಜ ವತಿಯಿಂದ ಗಣಹೋಮ ಸಹಿತ ರಾಮ ತಾರಕ ಹೋಮ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು, ತಮ್ಮ ವ್ಯವಹಾರ ವಹಿವಾಟು ಬಂಧ್ ಮಾಡಿದ ರಾಜಸ್ಥಾನ ಸಮಾಜದ ಬಂಧುಗಳು ಪೂಜೆಯಲ್ಲಿ ಪಾಲ್ಗೊಂಡು ವಿಶೇಷ ಗಮನ ಸೆಳೆದರು, ಸಂಜೆ ದೀಪೋತ್ಸವದ ವೇಳೆ ವಿಶೇಷ ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

Get real time updates directly on you device, subscribe now.

Comments are closed.

error: Content is protected !!