ರಾಮನ ದೇಗುಲ ನಿರ್ಮಿಸಿ ಐಕ್ಯತೆ ಮೆರೆದ ಗ್ರಾಮಸ್ಥರು

66

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಡಿ ಕಲ್ಕೆರೆ ಗ್ರಾಮದಲ್ಲಿ ಶ್ರೀರಾಮನ ದೇವಾಲಯವನ್ನು ಮುಸ್ಲಿಂ, ಹಿಂದೂ ಸಮುದಾಯದಿಂದ ನಿರ್ಮಾಣ ಮಾಡಿದ ಗ್ರಾಮಸ್ಥರು.
ಅಯೋಧ್ಯೆಯ ರಾಮನಿಗೂ ಕಲ್ಕೆರೆಯ ರಾಮನಿಗೂ ನಿಕಟ ಸಂಬಂಧವಿದ್ದು ಮೂರು ದಶಕಗಳ ಹಿಂದೆ ಅಯೋಧ್ಯಯಲ್ಲಿ ಶ್ರೀ ರಾಮ ದೇವಾಲಯ ನಿರ್ಮಾಣ ಮಾಡಬೇಕೆಂದು ಬಿಜೆಪಿಯ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಮಾಡಿದಾಗ 1990 ರಲ್ಲಿ ತುರುವೇಕೆರೆ ತಾಲೂಕಿಗೆ ಬಂದಾಗ ಇಲ್ಲಿನ ಗ್ರಾಮಸ್ಥರು ಇಲ್ಲಿ ರಾಮನ ದೇವಾಲಯ ನಿರ್ಮಾಣ ಮಾಡಬೇಕು ಎಂದು ಬಯಸಿ ಅಡಿಗಲ್ಲು ಹಾಕಿದ್ದರು, ಅಂದಿನಿಂದ ಇದು ಸಾಧ್ಯವಾಗಿರಲಿಲ್ಲ, ಮುಸ್ಲಿಂ ಸಮುದಾಯಗಳು ಇಲ್ಲಿ ಜಾಗ ಮಾಡಿದ್ದರು, ಈಗ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ ಆಗುವುದನ್ನು ಕಂಡಂತಹ ಗ್ರಾಮಸ್ಥರಿಗೆ ಅಂದಿನ ಕನಸು ನನಸು ಮಾಡಲು ಆಲೋಚನೆ ಮಾಡಿ ಮುಸ್ಲಿಂ ಸಮುದಾಯದ ಸಹಕಾರ ಪಡೆದು ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆಗುತ್ತಿರುವ ದಿನವೇ ಈ ಗ್ರಾಮದಲ್ಲಿಯೂ ರಾಮನ ದೇವಾಲಯ ನಿರ್ಮಾಣ ಮಾಡುವ ಮೂಲಕ ಐಕ್ಯತೆ ಸಾರಿದ್ದಾರೆ.
ದೇವಾಲಯದ ಉದ್ಘಾಟನೆ ಆದ ಮೇಲೆ ರಾಮನ ಮೆರವಣಿಗೆ ಮಾಡಲಾಯಿತು, ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!