ಗುಬ್ಬಿ: ಒಳ ಮೀಸಲಾತಿ ಜಾರಿಗೊಳಿಸುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ, ಒಳ ಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ರಾಜ್ಯ ಸರ್ಕಾರ ಕೈ ತೊಳೆದುಕೊಳ್ಳಲು ಹೊರಟಿದೆ ಎಂದು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲೂಕಿನ ಸಿ.ಎಸ್.ಪುರ ಹೋಬಳಿಯ ಅಂಕಳಕೊಪ್ಪ ಗ್ರಾಮದಲ್ಲಿ 50.84 ಲಕ್ಷ ರೂ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಕಾಮಗಾರಿಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ರಸ್ತೆಗಳು ಕಿತ್ತು ಹೋಗಿದ್ದು ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ, ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದೆ, ಕೊಬ್ಬರಿಗೆ 15000 ಬೆಲೆ ನಿಗದಿ ಮಾಡಬೇಕು, ವರ್ಷದ 365 ದಿನವೂ ನಾಫೆಡ್ ತೆರೆದಿರಬೇಕು, ಇದರಿಂದ ರೈತರಿಗೆ ಅನುಕೂಲ ಆಗಲಿವಾಗಲಿದೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಿದ್ದು ರಾಷ್ಟ್ರದ 140 ಕೋಟಿ ಜನರ ಕನಸು ನನಸಾಗಿದೆ, ಮುಸ್ಲಿಂ ಸಮುದಾಯ ಸೇರಿದಂತೆ ಯಾವುದೇ ಧರ್ಮದವರು ರಾಮ ಮಂದಿರವನ್ನು ವಿರೋಧಿಸಿಲ್ಲ, ಸೋನಿಯಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಹ್ವಾನ ನೀಡಲಾಗಿತ್ತು, ಆದರೆ ನೀವು ಹೋಗಿಲ್ಲ, ರಾಮ ಮಂದಿರ ನಿರ್ಮಾಣ ಮಾಡಿರುವುದು ಮೋದಿಯಲ್ಲ, ಸಾಧು ಸಂತರು, ದೇಶದ ಭಕ್ತಾದಿಗಳು, ಪ್ರಧಾನ ಮಂತ್ರಿಯಾಗಿರುವುದರಿಂದ ಅವರು ಉದ್ಘಾಟನೆ ಮಾಡಿದ್ದಾರೆ ಅಷ್ಟೇ, ನೀವೇನು ಬಂಡವಾಳ ಹಾಕಿದ್ದೀರಾ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು.
ಸಚಿವ ಕೆ.ಎನ್.ರಾಜಣ್ಣ ಅವರಿಗೆ ಎಷ್ಟು ಜನ ರಾಮರು ಇದ್ದಾರೋ ಗೊತ್ತಿಲ್ಲ, ಆದರೆ ನಮಗೆ ಗೊತ್ತಿರುವುದು ಒಬ್ಬನೇ ಶ್ರೀರಾಮಚಂದ್ರ ಪ್ರಭು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಬೋರಪ್ಪನಹಳ್ಳಿ ಕುಮಾರ್, ಜೆಡಿಎಸ್ ಹೋಬಳಿ ಅಧ್ಯಕ್ಷ ಜಗದೀಶ್, ಗ್ರಾಮ ಪಂಚಾಯತಿ ಸದಸ್ಯರಾದ ಕೃಷ್ಣ, ತಮ್ಮಯ್ಯ, ಹಬಿದಾಬಿ, ಯೋಗೇಶ್, ಮುಖಂಡರಾದ ನಂಜೇಗೌಡ, ಸಂತೋಷ್ ಇತರರು ಇದ್ದರು.
Comments are closed.